Breaking News

ಜೆಇಇ ಮೇನ್ ಪರೀಕ್ಷೆ: ಮಂಗಳೂರಿನ ಸಿಎಫ್‍ಎಎಲ್ ವಿದ್ಯಾರ್ಥಿಗಳು ಟಾಪರ್

 

ಮಂಗಳೂರು:  ಜೆಇಇ ಮೇನ್ 2023ರಲ್ಲಿ  ಪರೀಕ್ಷೆಯಲ್ಲಿ 11 ಸಿಎಫ್ಎಎಲ್  ವಿದ್ಯಾರ್ಥಿಗಳು ಶೇ 99 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.  ಕೇತನ್  ಹಾಗೂ ಸುಮನ್  ಶೇ 99. 87

ಅಂಕಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತ್ಯುತ್ತಮ ಶ್ರೇಣಿ ದಾಖಲಿಸಿದ್ದಾರೆ ಎಂದು ಸಿಎಫ್ ಎಎಲ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಸೆಂಟರ್ ಫಾರ್ ಅಡ್ವಾನ್ಸ್ ಲರ್ನಿಂಗ್  ಮತ್ತೊಮ್ಮೆ ತನ್ನ  ̧ಸಾಮರ್ಥ್ಯವನ್ನುಸಾಬೀತುಪಡಿಸಿದೆ.  ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ)) ಜೆಇಇ ಮುಖ್ಯ 2023,  ಸೆಷನ್ 1 ಫಲಿತಾಂಶಗಳನ್ನು ಫೆ 6 ರಂದು ಬಿಡುಗಡೆ ಮಾಡಿದೆ.  ಸಿಎಫ್ಎಎಲ್  ವಿದ್ಯಾರ್ಥಿಗಳು ಶ್ಲಾಘನೀಯ ಫಲಿತಾಂಶಗಳೊಂದಿಗೆ  ದೇಶದ ಅತ್ಯಂತ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸಿಎಫ್ಎಎಲ್ ಕೇತನ್, ಸುಮನ್  99.87 ಪರ್ಸೆಂಟೈಲ್  ̧ಅಂಕಿತ್ ಕಿನಿ  99.83  ಪರ್ಸೆಂಟೈಲ್   ̧ಸುಮಂತ್ ಮಾರ್ಟಿಸ್ 99.75  ಪರ್ಸೆಂಟೈಲ್ ಗಳಿಸಿದ್ದಾರೆ.

ಒಟ್ಟು 11 ವಿದ್ಯಾರ್ಥಿಗಳು 99 ಪರ್ಸೆಂಟೈಲ್ ಗಿಂತ  ಹೆಚ್ಚು ಮತ್ತು 24 ವಿದ್ಯಾರ್ಥಿಗಳು 98 ಪರ್ಸೆಂಟೈಲ್ ಗಿಂತ ಹೆಚ್ಚು ಪಡೆದಿದ್ದಾರೆ. 34 ವಿದ್ಯಾರ್ಥಿಗಳು

97 ಕ್ಕಿಂತ ಹೆಚ್ಚು ಪರ್ಸೆಂಟೈಲ್ ಅಂಕಗಳನ್ನು ಗಳಿಸಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

 ಸಿಎಫ್ಎಎಲ್ ವಿದ್ಯಾರ್ಥಿಗಳಿಗೆ ಅತ್ಯಂತ ಪರಿಣಾಮಕಾರಿ ಬೋಧನಾ ವಿಧಾನಗಳಿಂದ ಅಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದೆ. ಇದು ಜೆಇಇ  ಮೇನ್ ಗೆ ತಯಾರಾಗಲು ಸಹಕಾರಿ ಆಗುತ್ತಿದೆ ಎಂದು  ಟಾಪರ್ ಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  1.  

ಸಿಎಫ್ಎಎಲ್ ಕಲಿಕೆಯ ವ್ಯವಸ್ಥೆ ತುಂಬಾ ವಿಭಿನ್ನವಾಗಿದೆ,  ̧ಸಂಘಟಿತ ಮಾದರಿಯು ಮಹತ್ವಾಕಾಂಕ್ಷಿಗಳಿಗೆ ಪರಿಣಾಮಕಾರಿಯಾಗಿ ಕಲಿಯಲು ಅನುವು ಮಾಡಿಕೊಡುತ್ತದೆ.  ಸಿಎಫ್ಎಎಲ್ ನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ವೇಳಾ ಪಟ್ಟಿಯನ್ನು ಪಡೆಯುತ್ತಾರೆ

ಇದರಿಂದ ಅವರು ವರ್ಗೀಕೃತ ರೀತಿಯಲ್ಲಿ ಕಲಿಯಬಹುದು, ಇದು ಕಲಿಕೆ ಪ್ರಕ್ರಿಯೆಯನ್ನು ಫಲಪ್ರದವಾಗಿಸುತ್ತದೆ ಎಂದು ತಿಳಿಸಿದ್ದಾರೆ.

 ವಿದ್ಯಾರ್ಥಿಗಳು ಪರೀಕ್ಷಾ ವಿಭಾಗಕ್ಕೆ ಬಂದಾಗ, ತಮ್ಮ ಪ್ರಗತಿಯನ್ನು ಅಣಕು ಆನ್ ಲೈನ್ ಪರೀಕ್ಷೆ ಮೂಲಕ ಪ್ರವೇಶ ಪಡೆಯುತ್ತಾರೆ.  ಇದರಿಂದಾಗಿ ಅವರು ಎಲ್ಲಿ ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಗಮನಿಸಬಹುದು ಮತ್ತು ಅದರ ಮೇಲೆ ಗಮನ ಕೇಂದ್ರೀಕರಿಸಬಹುದು ಎಂದ ಟಿಪ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಗುತ್ತದ ಎಂದರು.

 ̄ಜೆಇಇ ಮೇನ್ಸ್ ಬಗ್ಗೆ:

ಸೆಷನ್ ಗಾಗಿ ಜೆಇಇ ಮೇನ್ ಪರೀಕ್ಷೆಯನ್ನು 2023 ಜನವರಿ ಕೊನೆಯ ವಾರ ಮತ್ತು ಫೆಬ್ರುವರಿ ಮೊದಲ ವಾರದಲ್ಲಿ

ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ನಾಟಾ ಪ್ರಕಾರ, ವರ್ಷ ಇದು ಜೆಇಇ ಮೇನ್ ಪತ್ರಿಕೆ 1 ಕ್ಕೆ 95.79 ಪ್ರತಿಶತದಷ್ಟು ಹಾಜರಾತಿ ದಾಖಲಿಸಿದೆ. ಒಟ್ಟು 8.6 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಿಸಿದ್ದರು. ಅದರಲ್ಲಿ 8.22 ಲಕ್ಷ ಜನರು ಜೆಇಇ ಮೇನ್ ಪತ್ರಿಕೆ 1 ಪರೀಕ್ಷೆಯಲ್ಲಿ ಪಾಸಾದರು.

  ವರ್ಷ ಜೆಇಇ ಎರಡು ಅವಧಿಗಳಲ್ಲಿ ನಡೆಸಲಾಗುತ್ತಿದೆ. ಎರಡನೇ  ̧ಸೆಷನ್ ಏಪ್ರಿಲ್  2023 ರಲ್ಲಿ ನಡೆಯಲಿದೆ.  ಜೆಇಇ ಮೇನ್ ಫಲಿತಾಂಶ 2023 ಜೊತೆಗೆ, ನಾಟಾ ಬಿಇ, ಬಿಟೆಕ್ ಪೇಪರ್ ಗಳಿಗೆ  ಮತ್ತು ಅಂತಿಮ ಉತ್ತರ ಕೀಗಳನ್ನು  ̧ಸಹ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು

ತಮ್ಮ ಜೆಇಇ ಮೇನ್ ಫಲಿತಾಂಶಗಳನ್ನು ಮತ್ತು ಜೆಇಇ ಮೇನ್ ಅಂತಿಮ ಉತ್ತರ ಕೀಯನ್ನು ಅಧಿಕೃತ ವೆ ̈ಪರಿಸಿಲಿಸಬಹುದು. jeemain.nta.nic.in

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com