Breaking News

ಇದೇ 25,26 ರಂದು ಬನವಾಸಿ ಕದಂಬೋತ್ಸವ: ಸಚಿವ ಹೆಬ್ಬಾರ್

 

ಕಾರವಾರ ( ಸಿರಸಿ): ಇದೇ 25, 26 ರಂದು ಬನವಾಸಿಯಲ್ಲಿ ಕದಂಬೋತ್ಸವ ಆಚರಿಸಲಾಗುತ್ತದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವ ಉದ್ಘಾಟಿಸಲಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಇಲ್ಲಿನ ಆಡಳಿತ ಸೌಧದಲ್ಲಿ ಬುಧವಾರ ನಡೆದ ಕದಂಬೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಎರಡು ವರ್ಷಗಳಿಂದ ಕೊವಿಡ್ ಕಾರಣದಿಂದಾಗಿ ಕದಂಬೋತ್ಸವ ಆಚರಿಸಿರಲಿಲ್ಲ. ಬನವಾಸಿ ವಿಶೇಷತೆಯನ್ನು ನಾಡಿಗೆ ತಿಳಿಸುವ ಕಾರ್ಯಕ್ರಮವನ್ನು ವರ್ಷ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಇನ್ನೂ ಕೆಲವೇ ದಿನಗಳು ಬಾಕಿ ಇರುವುದರಿಂದ ಅಧಿಕಾರಿಗಳು ತುರ್ತಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.

  1.  

ಕದಂಬೋತ್ಸವ ಕೇವಲ ಅಧಿಕಾರಿಗಳ, ಜನಪ್ರತಿನಿಧಿಗಳ ಕಾರ್ಯಕ್ರಮ ಆಗಬಾರದು. ಎಲ್ಲ ಪಕ್ಷ, ಸಾಮಾನ್ಯರು ಪಾಲ್ಗೊಳ್ಳುವ ಕಾರ್ಯಕ್ರಮ ಆಗಬೇಕು. ಫೆ.25 ರಂದು ಮುಖ್ಯಮಂತ್ರಿಗಳು ಬನವಾಸಿಯಲ್ಲಿ ಮೂರು ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಮಧುಕೇಶ್ವರ ದೇವಾಲಯದ ನೂತನ ರಥ ಲೋಕಾರ್ಪಣೆ, ವರದಾ ನದಿಗೆ ನೀರನ್ನು ಕೆರೆಗೆ ತುಂಬುವ ₹75 ಕೋಟಿ ವೆಚ್ಚದ ಕಾರ್ಯಕ್ರಮ ಉದ್ಘಾಟನೆ ಹಾಗೂ ಕದಂಬೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆಎಂದರು.

ಕದಂಬೋತ್ಸವದ ಪೂರ್ವದಲ್ಲಿ ಫೆ.23 ಬೆಳಿಗ್ಗೆ ಗುಡ್ನಾಪುರದಿಂದ ಕದಂಬ ಜ್ಯೋತಿ ಹೊರಡಲಿದೆ.  ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗುಡ್ನಾಪುರದಲ್ಲಿ ನಡೆಯಲಿದೆ. ಕದಂಬ ಜ್ಯೋತಿ ವಿವಿಧೆಡೆ ಸಂಚರಿಸಿ 25 ರಂದು ಬನವಾಸಿಗೆ ಬರಲಿದೆ ಎಂದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪವಿಭಾಗಾಧಿಕಾರಿ ದೇವರಾಜ ಆರ್. ಇತರರಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com