Breaking News

ಪ್ರೇಮಿಗಳ ದಿನದ ಬದಲು ಕೌ ಹಗ್ ಡೇ ಆಚರಿಸಲು ಮನವಿ

 

ಹೊಸದಿಲ್ಲಿ: ಪ್ರೇಮಿಗಳ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗಲೇ ಪ್ರಾಣಿ ಕಲ್ಯಾಣ ಮಂಡಳಿಯು ಹೊಸ ಪರಿಕಲ್ಪನೆಯೊಂದನ್ನು ಮಂದಿಟ್ಟಿದೆ.  ಫೆ. 14 ರಂದು ದನಗಳನ್ನು ಆಲಂಗಿಸುವ ದಿನ (ಕೌ ಹಗ್ಡೇ) ಎಂದು ಆಚರಿಸಲು ಕರೆ ನೀಡಿದೆ.

ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ದನಗಳ ಮಹತ್ವವನ್ನು ತನ್ನಮನವಿಯಲ್ಲಿ ತಿಳಿಸಿದ ಮಂಡಳಿ ಜನರಿಗೆ ಭಾವನಾತ್ಮಕ ಸಮೃದ್ಧತೆ ಮತ್ತು ಸಂತೋಷನ್ನು ತರಲುಕೌ ಹಗ್ಡೇಆಚರಿಸಲು ಬಯಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

  1.  

ಮೀನುಗಾರಿಕಾ, ಪಶುಸಂಗೋಪನೆ ಮತ್ತು ಹೈನೋದ್ಯಮ ಸಚಿವಾಲಯ ಹಾಗೂ ಮಂಡಳಿ ಜಂಟಿಯಾಗಿ ಕೌ ಹಗ್ಡೇ ಆಚರಿಸಲು ನಿರ್ಧರಿಸಿದೆ.

ಎಲ್ಲಾ ಗೋ ಪ್ರೇಮಿಗಳು ಫೆ. 14 ರಂದು ಗೋಮಾತೆ ಮಹತ್ವವನ್ನು ಗಮನದಲ್ಲಿರಿಸಿ ಹಾಗೂ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಂತೋಷಕ್ಕಾಗಿ ಕೌ ಹಗ್ಡೇ ಆಗಿ ಆಚರಿಸಬೇಕು,” ಎಂದು ಮಂಡಳಿ ಹೇಳಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com