Breaking News

550 ಪ್ರವಾಸಿಗಳನ್ನು ಹೊತ್ತು ಬಂದ ಎಂಎಸ್ ನೌಟಿಕಾ ಹಡಗು

 

ಕರಾವಳಿ ಡೈಲಿನ್ಯೂಸ್

ಮಂಗಳೂರು: 550 ಪ್ರವಾಸಿಗರು ಮತ್ತು 400 ಸಿಬ್ಬಂದಿ ಹೊತ್ತು ಬಂದಿರುವ ಎಂಎಸ್ ನೌಟಿಕಾ ಐದನೇ ಪ್ರವಾಸಿ ಹಡಗು ನವಮಂಗಳೂರು ಬಂದರಿಗೆ ಬಂದಿದ್ದು, 4ನೇ ಬರ್ತ್‌ನಲ್ಲಿ ಲಂಗರು ಹಾಕಿ ನಿಲುಗಡೆ ಮಾಡಲಾಗಿದೆ.

 

  1.  

180.5 ಮೀಟರ್ ಉದ್ದವಿದ್ದು, 30,277 ಟನ್ ಭಾರದ ಸಾಮರ್ಥ್ಯವನ್ನು ಹೊಂದಿದೆ. 6 ಮೀಟರ್ ಡ್ರಾಫ್ಟ್ ಹೊಂದಿದೆ. ಮಸ್ಕತ್ ನಿಂದ ಭಾರತಕ್ಕೆ ಬಂದಿರುವ ಈ ಹಡಗು ಈ ಹಿಂದೆ ಮುಂಬೈ ಮತ್ತು ಮೊರ್ಮುಗಾವೊ ಬಂದರ್ ನಲ್ಲಿ ನಿಲುಗಡೆ ಆಗಿತ್ತು.

ಹಡಗಿನ ಪ್ರವಾಸಿಗರಿಗೆ ಯಕ್ಷಗಾನ ಮತ್ತು ಸಾಂಪ್ರದಾಯಿಕ ಡೋಲು ಕುಣಿತದ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು. ಪ್ರವಾಸಿಗರಿಗೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಯಿತು. ಪ್ರಯಾಣಿಕರ ವೈದ್ಯಕೀಯ ತಪಾಸಣೆ, ತ್ವರಿತ ಚಲನೆಗಾಗಿ ವಲಸೆ ಮತ್ತು ಕಸ್ಟಮ್ಸ್ ಕೌಂಟರ್, ಮಂಗಳೂರು ನಗರದ ಸ್ಥಳೀಯ ಮಾರುಕಟ್ಟೆ ಮತ್ತು ಅಂಗಡಿಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗೆ 2 ಶಟಲ್ ಬಸ್ ಗಳು ಸೇರಿದಂತೆ 15 ಬೋಗಿಗಳ ಬಸ್, ಟ್ಯಾಕ್ಸಿಗಳು, ಪ್ರವಾಸಿ ಕಾರು ವ್ಯವಸ್ಥೆ ಮಾಡಲಾಯಿತು. ಕ್ರೂಸ್ ಲಾಂಜ್ ಒಳಗೆ ಆಯುಷ್ ಇಲಾಖೆ ಸ್ಥಾಪಿಸಿದ ಧ್ಯಾನ ಕೇಂದ್ರದ ಪ್ರಯೋಜನಗಳನ್ನು ಕ್ರೂಸ್ ಪ್ರವಾಸಿಗರು ಪಡೆದುಕೊಂಡರು. ಬಟ್ಟೆ ಮತ್ತು ಕರಕುಶಲ ಮಳಿಗೆಗಳನ್ನು ಪ್ರವಾಸಿಗರಿಗಾಗಿ ತೆರೆದಿಡಲಾಗಿತ್ತು.

ಪ್ರವಾಸಿಗರು ಮಂಗಳೂರು ನಗರ ಮತ್ತು ಸುತ್ತಲಿನ ವಿವಿಧ ಪ್ರವಾಸಿ ತಾಣ, ದೇವಾಲಯ, ಚರ್ಚ್ ಗೆ ಭೇಟಿ ನೀಡಡುವರು. ಸ್ಥಳೀಯ ಮಾರುಕಟ್ಟೆ ಪ್ರದೇಶಗಳಿಗೂ ಭೇಟಿ ನೀಡುವರು. ಹಡಗು 1600 ಎಚ್ ಆರ್ ಎಸ್ ನಲ್ಲಿ ಕೊಚ್ಚಿನ್ ಗೆ ಪ್ರಯಾಣಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com