Breaking News

ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್

 

ಬೆಂಗಳೂರು: ಮಗನ ಆರೈಕೆಯನ್ನು ನಿರ್ಲಕ್ಷಿಸಿ, ಪ್ರಿಯಕರನಿಗೆ ಹೆಚ್ಚಿನ ಆದ್ಯತೆ ನೀದ್ದ ತಾಯಿ ವರ್ತನೆ ಪರಿಗಣಿಸಿ ಬಾಲಕನನ್ನು ತಾಯಿಯ ವಶದಿಂದ ತಂದೆಯ ವಶಕ್ಕೆ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಮಗನನ್ನು ತಂದೆಯ ವಶಕ್ಕೆ ನೀಡುವಂತೆ ಆದೇಶ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ತಾಯಿ ಸಲ್ಲಿಸಿದ್ದ  ಅರ್ಜಿಯ ವಿಚಾರಣೆ  ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ.

  1.  

ಮಗು ವಶಕ್ಕೆ ಪಡೆದಿದ್ದ ತಾಯಿ ಪತಿ ಮನೆ ತೊರೆದ ನಂತರ ಅಕ್ರಮ ಸಂಬಂಧದಲ್ಲಿದ್ದು, ಪ್ರಿಯಕರನ ಜತೆ ಬಾಡಿ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮನೆಯೇ ಬಾಲಕನಿಗೆ ಮೊದಲ ಪಾಠ ಶಾಲೆಯಾಗಿದ್ದು, ಪೋಷಕರು ಮೊದಲ ಗುರುಗಳು. ಮಗು ಸರಿಯಾದ ಪೋಷಕತ್ವದಿಂದ ವಂಚಿತವಾದಾಗ, ಅದರ ಒಟ್ಟಾರೆ ಬೆಳವಣಿಗೆ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನ್ಯಾಯಾಲಯಗಳು ಮಗು ಬೆಳೆಯುತ್ತಿರುವ ಸುತ್ತಲಿನ ಪರಿಸರ, ವೀಕ್ಷಣೆ, ಆರೈಕೆ ಮತ್ತು ಪ್ರೀತಿಯ ಲಭ್ಯತೆ ಮೂಲಕ ಮಗು ಕಲಿವ ನೈತಿಕ ಮೌಲ್ಯಗಳನ್ನು ಪರಿಗಣಿಸಬೇಕು.

ಮಗುವಿಗೆ ಇದು ಹೆಚ್ಚು ಅಗತ್ಯವಿದ್ದು, ನಂತರ ಸಮತೋಲನವನ್ನು ಸಾಧಿಸಿ, ಅದು ಮಗುವಿನ ಕಲ್ಯಾಣ ಮತ್ತು ಹಿತಾಸಕ್ತಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ..

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com