Breaking News

ಗಾನ  ನಿಲ್ಲಿಸಿದ ಗಾಯನ ಹಕ್ಕಿ ವಾಣಿ ಜೈರಾಮ್

 

ಚೆನ್ನೈ: ಹಲವು ಭಾಷೆಗಳಲ್ಲಿ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಹಿನ್ನೆಲೆ ಗಾಯಕಿ ವಾಣಿ ಜೈರಾಮ್ ಅವರು ಶನಿವಾರ ನಿಧನ ಹೊಂದಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಚೆನ್ನೈನ ನುಂಗಂಬಾಕ್ಕಂನ ಹ್ಯಾಡೋಸ್ ರಸ್ತೆಯಲ್ಲಿರುವ ಅವರ ಮನೆಯಲ್ಲಿ ನಿಧನ ಹೊಂದಿದ್ದಾರೆ.

  1.  

ಹೆಸರಾಂತ ಗಾಯಕಿ ಐದು ದಶಕಗಳ ಕಾಲದ ವೃತ್ತಿ ಜೀವನದಲ್ಲಿ, ತಮಿಳು, ಹಿಂದಿ, ತೆಲುಗು, ಮಲಯಾಳಂ, ಅಸ್ಸಾಮಿ ಮತ್ತು ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಾದ್ಯಂತ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದರು.

ವಾಣಿ ಜೈರಾಮ್ ಅವರು ಇತ್ತೀಚೆಗೆ ವೃತ್ತಿಪರ ಗಾಯಕಿಯಾಗಿ 50 ವರ್ಷಗಳನ್ನು ಪೂರೈಸಿದ್ದರು ಇಳಯರಾಜ, ಆರ್‌ಡಿ ಬರ್ಮನ್, ಕೆ ವಿ. ಮಹದೇವನ್, ಓಪಿ ನಯ್ಯರ್ ಮತ್ತು ಮದನ್ ಮೋಹನ್ ಸೇರಿದಂತೆ ಇತರ ಪ್ರಸಿದ್ಧ ಸಂಯೋಜಕರೊಂದಿಗೆ ಕೆಲಸ ಮಾಡಿದ್ದರು. ಇತ್ತೀಚೆಗೆ ಅವರಿಗೆ ಅತ್ಯುನ್ನತ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com