Breaking News

ಅರ್ಧಚಕ್ರಾಸನ ಅಸ್ತಮಾ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿನಾ..

 

ಕರಾವಳಿ  ಡೈಲಿ ನ್ಯೂಸ್

ಈ ಆಸನವು ನಿಂತುಕೊಂಡು ದೇಹವನ್ನು ಶಿಸ್ತು ಬದ್ಧವಾಗಿ ಸ್ವಲ್ಪ ಹಿಂದಕ್ಕೆ ಬಾಗಿಸುವ ಭಂಗಿಯಾಗಿದೆ. ದೇಹವನ್ನು ಶಿಸ್ತು ಬದ್ಧವಾಗಿ  ಹಿಂದಕ್ಕೆ ಬಾಗಿಸಿದಾಗ  ಶ್ವಾಸಕೋಶದ ಭಾಗ ಎಳೆತಕ್ಕೆ ಒಳಗಾಗಿ ಹೆಚ್ಚಿನ ಪ್ರಮಾಣದಲ್ಲಿ ವಾಯು ಸಂಚಾರವಾಗುತ್ತದೆ.

  1.  

ಅಭ್ಯಾಸ ಕ್ರಮ: ಪ್ರಪ್ರಥಮವಾಗಿ ತಾಡಾಸನದಲ್ಲಿ ನೆಲೆಸಬೇಕು. ನಂತರ ಸೊಂಟದ ಹಿಂಭಾಗಕ್ಕೆ ಎರಡು ಕೈಗಳನ್ನು ಜೋಡಿಸಬೇಕು. ನಂತರ ಉಸಿರನ್ನು ತೆಗೆದುಕೊಂಡು ಸೊಂಟದ ಮೇಲ್ಭಾಗದಿಂದ ಹಿಂದಕ್ಕೆ ಬಾಗಿಸಬೇಕು (ಮೊಣಕಾಲು ಬಾಗಿಸಬಾರದು). ಕುತ್ತಿಗೆ ಮತ್ತು ತಲೆಯನ್ನು ಸಡಿಲಿಸಬೇಕು. ಈ ಸ್ಥಿತಿಯಲ್ಲಿ 20 ಸೆಕುಂಡು ಸಾಮಾನ್ಯ ಉಸಿರಾಟದಲ್ಲಿ  ನೆಲೆಸಬೇಕು. ಆಮೇಲೆ ಉಸಿರನ್ನು ಬಿಡುತ್ತಾ ನಿಧಾನವಾಗಿ ಸ್ಥಿತಿಗೆ ಬರಬೇಕು.  2 ನಿಮಿಷ ವಿಶ್ರಾಂತಿ. ಈ ಆಸನ 2 ಯಾ 3 ಬಾರಿ ಅಭ್ಯಾಸ ಮಾಡಬೇಕು.

ಉಪಯೋಗಗಳು : ಬೆನ್ನಿನ ಹುರಿಯ ಬಿಗಿತ ನಿವಾರಣೆಯಾಗುತ್ತದೆ.  ತಲೆಯಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಒದಗಿ ನರಮಂಡಲ ಸಚೇತನಗೊಳ್ಳುವುದು. ಎದೆಯ ಭಾಗಕ್ಕೆ ಮೃದುವಾದ ವ್ಯಾಯಾಮ ದೊರಕುತ್ತದೆ.  ಅಸ್ತಮಾ ಸಮಸ್ಯೆ ನಿವಾರಣೆಯಾಗಲು, ಥೈರಾಯಿಡ್ ಗ್ರಂಥಿಯ ಆರೋಗ್ಯಕ್ಕೆ ಈ ಆಸನ ಉಪಯುಕ್ತವಾಗುವುದು.

ಗಮನಿಸಿ:  ತೀವ್ರ ಕುತ್ತಿಗೆ ನೋವು ಇದ್ದವರು  ಅಭ್ಯಾಸ ನಡೆಸುವುದು ಬೇಡ. ಕೆಲವರಿಗೆ ಹಿಂದಕ್ಕೆ ಭಾಗುವಾಗ ತಲೆತಿರುಗಿದ ಅನುಭವವಾಗುತ್ತದೆ. ಅಭ್ಯಾಸದ ಮೂಲಕ ಸರಿ ಹೋಗುತ್ತದೆ.

  1.  

Leave a Reply

Your email address will not be published. Required fields are marked *