Breaking News

ಗ್ರಾಮೀಣ ಅಂಚೆ ಸೇವಕರ ಹುದ್ದೆ ನೇಮಕಾತಿ: ಶ್ರೀಹರ್ಷ

 

ಕರಾವಳಿ ಡೈಲಿನ್ಯೂಸ್

ಮಂಗಳೂರು: ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಸಂಬಂಧಿಸಿದಂತೆ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆಪಾಲಕ ಮತ್ತು ಢಾಕ್ ಸೇವಕ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ನೇಮಕಾತಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಂಗಳೂರು ಅಂಚೆ ವಿಭಾಗದ ಅಧೀಕ್ಷಕ ಶ್ರೀಹರ್ಷ, ಎನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ಫೆ. 16 ಆಗಿರುತ್ತದೆ. https://indiapostgdsonline.gov.in ಮೂಲಕ ಸಲ್ಲಿಸಬೇಕು. ಬೇರೆ ಯಾವುದೇ ವಿಧಾನದ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸಂಪೂರ್ಣ ಪ್ರಕ್ರಿಯೆ ಜುಲೈ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.

ಗ್ರಾಮೀಣ  ಅಂಚೆ ಸೇವಕರ ನೇಮಕಾತಿ  ಮೊದಲ ಬಾರಿಗೆ, ಅಖಿಲ ಭಾರತ ಮಟ್ಟದಲ್ಲಿ ಬೃಹತ್ ಸಂಖ್ಯೆಯ ಖಾಲಿ ಹುದ್ದೆಗಳೊಂದಿಗೆ ನಡೆಯುತ್ತಿದೆ. ಭಾರತದಾದ್ಯಂತ ಸೂಚಿಸಲಾದ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 40889. ಅದರಲ್ಲಿ 3036 ಕರ್ನಾಟಕಕ್ಕೆ ಸಂಬಂಧಿಸಿದೆ. ಮಂಗಳೂರು ವಿಭಾಗದಲ್ಲಿ ಒಟ್ಟು 95 ಹುದ್ದೆಗಳು ಖಾಲಿ ಇದ್ದು ಆನ್ ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.

  1.  

ಶಾಖಾ ಅಂಚೆ ಪಾಲಕ,  ಸಹಾಯಕ ಅಂಚೆಪಾಲಕ, ಢಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 40 ವರ್ಷದ ವಯೋಮಿತಿಯೊಳಗಿರಬೇಕು. ಅನುಸೂಚಿತ ಜಾತಿ ಮತ್ತು ಇತರ ವರ್ಗಗಳಿಗೆ 5 ವರ್ಷಗಳ ವಿನಾಯಿತಿ, ಒ.ಬಿ.ಸಿ ಅಂದರೆ ಇತರ ಹಿಂದುಳಿದ ವರ್ಗದವರಿಗೆ 3 ವರ್ಷದ ವಿನಾಯಿತಿ ಅನ್ವಯಿಸುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುವುದಿಲ್ಲ ಎಂದರು.

ಎಲ್ಲಾ ಹುದ್ದೆಗಳಿಗೆ 10 ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವುದು ಕಡ್ಡಾಯ. ಅರ್ಜಿ ಸಲ್ಲಿಸುವ ಮಾಹಿತಿಗಳು https://indiapost.gov.in ಅಥವಾ https://indiapostgdsonline.gov.in  ವೆಬ್ ಸೈಟ್ ನಲ್ಲೂ ಕೂಡ ಲಭ್ಯವಿದೆ. ಮಂಗಳೂರಿನಲ್ಲಿ ಸುಮಾರು 95  ಹುದ್ದೆಗಳಿರುವುದರಿಂದ ಹಾಗೂ ಆಯ್ಕೆಯು ಸಂಪೂರ್ಣವಾಗಿ ಅಂಕಗಳ ಆಧಾರದಲ್ಲಿ  ನಡೆಯಲಿದೆ ಎಂದರು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ ಅಥವಾ ವಿಭಾಗೀಯ ಕಚೇರಿ, ಬಲ್ಮಠವನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 0824-2218400 ಸಂಪರ್ಕಿಸಿ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com