Breaking News

ವೃಕ್ಷಾಸನದಿಂದ ಸಿಗುವ ಲಾಭಗಳೇನು? ಅಭ್ಯಾಸ ಕ್ರಮ ಹೇಗೆ? ಇಲ್ಲಿದೆ ಟಿಪ್ಸ್

 

⇒ ಗೋಪಾಲಕೃಷ್ಣ ದೇಲಂಪಾಡಿ

ವೃಕ್ಷ ಎಂಬುದು ಸಂಸ್ಕೃತ ಪದ. ವೃಕ್ಷ ಎಂದರೆ ಮರ. ಆಸನ ಎಂದರೆ ದೇಹದ ನಿಲುಮೆಯಾಗಿದೆ. ಈ ಆಸನವು ಮರದ ಆಕಾರವನ್ನು ಹೋಲುತ್ತದೆ.  ವಿದ್ಯಾರ್ಥಿಗಳಿಗೆ ಈ ಆಸನ ಬಹಳ ಉಪಕಾರಿ. ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಏಕಾಗ್ರತೆಗಾಗಿ ಈ ಆಸನವನ್ನು ಅಭ್ಯಾಸ ಮಾಡುತ್ತಿದ್ದರು.  

ಅಭ್ಯಾಸ ಕ್ರಮ: ತಾಡಾಸನದಲ್ಲಿ (ಸ್ಥಿತಿ) ನಿಲ್ಲಬೇಕು. ಬಲಗಾಲ ಮಂಡಿಯನ್ನು ಬಗ್ಗಿಸಿ ಎಡತೊಡೆಯ ಮೂಲೆಗೆ ಸೇರಿಸಬೇಕು. ಅನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ನೇರವಾಗಿ ತಲೆ ಮೇಲೆ ಎತ್ತಿ ಹಿಡಿದು ಅಂಗೈಗಳನ್ನು ಜೋಡಿಸಿ. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತಾ ಸ್ವಲ್ಪ ಹೊತ್ತು ನಿಲ್ಲಬೇಕು. ಅನಂತರ ವಿಶ್ರಮಿಸಿ. ಹಾಗೆಯೇ ಇನ್ನೊಂದು ಬದಿಯಿಂದ ಎಡಗಾಲಿನ ಮಂಡಿ ಬಗ್ಗಿಸಿ ಮೇಲೆ ತಿಳಿಸಿದಂತೆ ಮಾಡಬೇಕು.

  1.  

ಒಂದೇ ಕಾಲಿನ ಮೇಲೆ ಶರೀರದ ಭಾರವನ್ನು ಹಾಕಿ, ಸಮತೋಲನ ತಪ್ಪದಂತೆ ನಿಂತ ಕಾಲಿನ ಹೆಬ್ಬೆರಳಿನ ಹಿಂಭಾಗವನ್ನು ನೆಲಕ್ಕೆ ಒತ್ತಬೇಕು ಆರಂಭದಲ್ಲಿ ಈ ಆಸನ ತುಸು ಕಷ್ಟವಾಗಬಹುದು ಆನಂತರ ಸರಳ, ಸುಲಭವಾಗುತ್ತದೆ.

ವೃಕ್ಷಾಸನ ಸಮತೋಲನ ಸ್ಥಿತಿಯನ್ನು ಕಾಪಾಡುವ ಭಂಗಿಯಾಗಿದೆ. ಈ ಆಸನ ಕೈವಶವಾದರೆ ಮುಂದಿನ ಯೋಗಾಸನ ಅಭ್ಯಾಸ ಮಾಡಲು ಸುಲಭವಾಗುತ್ತದೆ. ಇಲ್ಲಿ ಕಾಲುಗಳು, ತೋಳುಗಳು, ಶಿರಸ್ಸು ಇತ್ಯಾದಿ ಭಾಗಗಳಿಗೆ ಮರದ ಬೇರು, ಗೆಲ್ಲುಗಳು, ಎಲೆಗಳಿಗೆ ಹೋಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾದ ಆಸನವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಈ ಆಸನವನ್ನು ಕಲಿತು ನಿತ್ಯ ನಿರಂತರವಾಗಿ ಅಭ್ಯಾಸ ಮಾಡಬೇಕು.

ವಿ.ಸೂ : ಹೆಚ್ಚಿನ ರಕ್ತದೊತ್ತಡ. ಮೈಗ್ರೇನ್ ತುಂಬಾ ಮಂಡಿ ನೋವು ಇದ್ದವರು ಈ ಆಸನವನ್ನು ಅಭ್ಯಾಸ ಮಾಡುವುದು ಬೇಡ. ಸುಮಾರು 40 ವರ್ಷ ಮೇಲ್ಪಟ್ಟವರು ಗೋಡೆಗೆ ಒರಗಿ ಆರಂಭದಲ್ಲಿ ಅಭ್ಯಾಸ ಮಾಡುವುದು ಉತ್ತಮ. ಆಸನ ಅಭ್ಯಾಸ ಮಾಡುವಾಗ ದೃಷ್ಠಿ ನೇರವಾಗಿರಬೇಕು. ಒಂದೇ ಕಡೆ ದೃಷ್ಠಿ ನೇರವಾಗಿಸಿ ನೋಡುತ್ತಾ ಅಭ್ಯಾಸ ಮಾಡಬೇಕು. ಇಲ್ಲಿ ಎರಡು ಕೈಗಳನ್ನು ಶಿರಸ್ಸಿನ ಮೇಲೆ ತರುವಾಗ ತೋಳುಗಳು ಕಿವಿಗೆ ಒತ್ತಿರಬೇಕು. ಇದರಿಂದ ತೋಳುಗಳ ನರಗಳು, ಮೊಣಕೈಗಳು ಬಲಗೊಳ್ಳುತ್ತದೆ. 

ಉಪಯೋಗಗಳು: ದೇಹದ ಅಂಗಾಂಗಳು ಎಳೆತಕ್ಕ ಒಳಗಾಗುತ್ತದೆ. ಮನಸ್ಸಿನ ದೃಡತೆ ಹೆಚ್ಚಾಗುತ್ತದೆ. ಮನಸ್ಸಿನ ಏಕಾಗ್ರತೆ  ಹೆಚ್ಚಿ, ಒತ್ತಡ ನಿಯಂತ್ರಣಗೊಳ್ಳುತ್ತದೆ. ಪೃಷ್ಠದ ಭಾಗ ಬಲಿಷ್ಠವಾಗುತ್ತದೆ. ಮೂಲಧಾರ ಚಕ್ರ ಪುನಶ್ಚೇತನಗೊಳ್ಳುತ್ತದೆ. ಕೀಲುಗಳ ಸಂದಿವಾತದ ಸಮಸ್ಯೆ ನಿವಾರಣೆಗೆ ಸಹಕಾರಿ. ಬೆನ್ನು ಮೂಳೆಯು ಬಲಗೊಳ್ಳುತ್ತದೆ. ಈ ಆಸನದಿಂದ ಕಾಲಿನ ಮಾಂಸ ಖಂಡಗಳು ಪಳಗುತ್ತವೆ. ಸಮಸ್ಥಿತಿಯಲ್ಲಿ ನೆಲೆಸಲು ಅಭ್ಯಾಸವಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಆಸನ  ಬಹಳ ಪ್ರಯೋಜನಕಾರಿಯಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com