Breaking News

‘ಕ್ರೀಡಾ ಹೊಳಪು’ ನಿಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಲಿ: ಕಾಗೇರಿ

 

ಕರಾವಳಿ ಡೈಲಿನ್ಯೂಸ್

ಕಾರವಾರ (ಕುಮಟಾ): ಜನರು  ಆತುರದ ಅಭಿವೃದ್ಧಿ ಬಯಸುತ್ತಿದ್ದು, ಅವರಿಗೆ ವಿಶ್ವಾಸ ಮೂಡಿಸುವ ಕಾರ್ಯವನ್ನು ಸ್ಥಳೀಯ ಜನಪ್ರತಿನಿಧಿಗಳು ಮಾಡಬೇಕು. ಸರಕಾರದ ಇತಿ, ಮಿತಿಗಳನ್ನು ಬಗ್ಗೆ ಹಾಗೂ ಬರುವಂತಹ ಅನುದಾನ, ಖರ್ಚು ವೆಚ್ಚಗಳ ಬಗ್ಗೆ ತಿಳಿಸುವ ಕೆಲಸ ಆಗಬೇಕು ಎಂದು  ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಮಣಕಿ ಮೈದಾನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಕ್ರೀಡೋತ್ಸವ- ಸಾಂಸ್ಕೃತಿಕ ಸ್ಪರ್ಧೆ ಹೊಳಪು ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.

ಶಾಸಕಾಂಗದ ಭಾಗವೇ ಆಗಿರುವ ಸ್ಥಳೀಯ ಸಂಸ್ಥೆಗಳ ಸದಸ್ಯರು ಕೇವಲ ವಿಧಾನಸಭೆ, ಲೋಕಸಭೆಯನ್ನಷ್ಟೇ ನೋಡದೇ ನಮ್ಮ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಜನರಿಗೆ ತಲುಪಿಸುವಲ್ಲಿ ಮುಂದಾಗಿದ್ದೀರಿ ಎಂಬುದು ತಿಳಿದಿದೆ. ಜನರ ಅಗತ್ಯಗಳನ್ನು ಪೂರೈಸಲು ತಮಗೆ ಬೇಕಾದ ಶಕ್ತಿಗಳನ್ನು ನೀಡುವಲ್ಲಿ ಸರಕಾರ ನಿಮ್ಮ ಜೊತೆಗಿದೆ ಎಂದರು.

 

  1.  

ಅಭಿವೃದ್ಧಿಗೆ ನಾವಿಟ್ಟಿರುವ ಹೆಜ್ಜೆಯನ್ನು ಜನರಿಗೆ ಮನದಟ್ಟು ಮಾಡುವ ಅಗತ್ಯ ಇದೆ.  ಅಭಿವೃದ್ಧಿ ಜತೆ ಜತೆಯಲ್ಲಿ ಜನರೊಂದಿಗಿನ ನಿಮ್ಮ ಪ್ರೀತಿ, ಸೌಹಾರ್ಧ ಸಂಬಂಧಗಳು, ನಿಮ್ಮ ಒಡನಾಟ ಸಂಪರ್ಕಗಳು ಸಹ ವಿಕೇಂದ್ರೀಕರಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕಾರಣವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಯ 229 ಗ್ರಾಮ ಪಂಚಾಯತದಿಂದ 2666 ಸದಸ್ಯರು, 13 ನಗರಾಡಳಿತ ಸಂಸ್ಥೆಯಿಂದ 450 ಸದಸ್ಯರು, ಸಿಬ್ಬಂದಿ ಸೇರಿ 3 ಸಾವಿರ ಕ್ರೀಡಾಪಟುಗಳು ಈ ಹಬ್ಬದಲ್ಲಿ ಭಾಗವಹಿಸಿರುವುದು ಸಂತೋಷದ ಕ್ಷಣ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೌರವ ವಂದನಾ ಸ್ವೀಕಾರಿಸಿದರು.  ಪಥಸಂಚಲನಕ್ಕೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಚಾಲನೆ ನೀಡಿದರು.  ಕ್ರೀಡಾಜ್ಯೋತಿಯನ್ನು ಶಾಸಕ ಶಾಂತಾರಾಮ ಸಿದ್ಧಿ, ಧ್ವಜಾರೋಹಣವನ್ನು ಶಾಸಕಿ ರೂಪಾಲಿ ನಾಯ್ಕ ನೆರವೇರಿಸಿದರು. 

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಪೋಲಿಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಡಿಡಿಪಿಐ ಈಶ್ವರ ನಾಯ್ಕ, ಡಯೆಟ್ ಪ್ರಾಚಾರ್ಯ ಎನ್.ಜಿ.ನಾಯಕ, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣಕುಮಾರ, ಕ್ರೀಡಾ ಅಧಿಕಾರಿ ಶಿವಾನಂದ ನಾಯ್ಕ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಶೆಟ್ಟಿ, ಐಎಸ್‌ಎ ಅಧಿಕಾರಿ ಜುಬೇನ್ ಮಹಾಪಾತ್ರ, ಸಹಾಯಕ ಆಯುಕ್ತ ರಾಘವೇಂದ್ರ ಜಗಲಸರ್, ತಹಶೀಲ್ದಾರ ವಿವೇಕ ಶೇಣ್ವಿ, ತಾಲೂಕಾ ಕಾರ್ಯನಿರ್ವಹಣಾಧಿಕಾರಿ ನಾಗರತ್ನ ನಾಯಕ, ಸ್ಥಳೀಯ ಸಂಸ್ಥೆಗಳ, ನಗರಾಡಳಿತ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.

ಎಲ್ಲ ಗ್ರಾಮ ಪಂಚಾಯತಗಳಿಂದಲೂ ವಿವಿಧ ಆಕರ್ಷಕ ಟ್ಯಾಬ್ಲೋ ಮೂಲಕ ಪಥಸಂಚಲನ ನಡೆಯಿತು. ಹಿಂದುಳಿದ ವರ್ಗದ ವಸತಿ ನಿಲಯದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಯೋಗೇಶ ಕೋಡ್ಕಣಿ, ಹರೀಶ, ಸತೀಶ  ನಿರೂಪಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com