Breaking News

ರಾಜ್ಯದಲ್ಲಿಯೇ ಮೊದಲ ಬಾರಿಗೆ ಮುದೂರಿನಲ್ಲಿ ಸಂಚಾರಿ ಚಿತಾಗಾರ

 

ಕರಾವಳಿ ಡೈಲಿನ್ಯೂಸ್

ಉಡುಪಿ(ಕುಂದಾಪುರ):  ಶವ ಸಂಸ್ಕಾರದ ತೀವ್ರ ಸಮಸ್ಯೆ ಉಸಿರು ಗಟ್ಟಿದ್ದ ಜನರ ಸಮಸ್ಯೆಗೆ ಕುಂದಾಪುರ ತಾಲ್ಲೂಕಿನ ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ.

ಮುದೂರು ಗ್ರಾಮದಲ್ಲಿ ಒಟ್ಟು 600ಕ್ಕೂ ಹೆಚ್ಚು ಮನೆಗಳಿದ್ದು, ಯಾರದ್ದಾರೂ ಮನೆಯಲ್ಲಿ ಸಾವು ಸಂಭವಿಸಿದರೆ ಶವ ಸಂಸ್ಕಾರಕ್ಕೆ ಜನರು ಪರದಾಟ ಮಾಡಬೇಕಾದ ಸ್ಥಿತಿ ಇತ್ತು.  ಅದಲ್ಲತೆ ದೂರದ ಕುಂದಾಪುರಕ್ಕೆ ಶವವನ್ನು ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು.

  1.  

ಮುದೂರು ಗ್ರಾಮದ ಜನರಿಗೆ ಏನಾದರೂ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಜನರ ಸಮಸ್ಯೆಗೆ ಸ್ಪಂದಿಸಿ ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಂಚಾರಿ ಚಿತಾಗಾರವನ್ನು ಆರಂಭಿಸಿದೆ. ಇದರಿಂದ ಜನರು ಶವ ಸಂಸ್ಕಾರಕ್ಕೆ ಪರದಾಡುವುದನ್ನು ತಪ್ಪಿಸಿದ್ದಂತೆ ಆಗುತ್ತದೆ ಎಂಬ ಕಾರಣದಿಂದ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ವಿಜಯ ಶಾಸ್ತ್ರಿ ಹಾಗೂ ಸಿಇಒ ಪ್ರಭಾಕರ ಪೂಜಾರಿ ತಿಳಿಸಿದರು.

ಕೇರಳದ ಸಂಸ್ಥೆಯೊಂದರಿಂದ ಸಂಚಾರಿ ಚಿತಾಗಾರವನ್ನು ವಿನ್ಯಾಸ ಮಾಡಿಸಲಾಗಿದೆ. ಇದಕ್ಕೆ ಬರೊಬ್ಬರಿ 5.8 ಲಕ್ಷದಷ್ಟು ಖರ್ಚು ಆಗಿದೆ. ಸಂಚಾರಿ ಚಿತಾಗಾರದಲ್ಲಿ ಎಲ್ಪಿಜಿ ಸಿಲಿಂಡರ್ ಇಡಲಾಗಿದ್ದು, ಇದರ ಮೂಲಕವೇ ಶವ ಸುಡಲಾಗುತ್ತದೆ. ಯಾರದ್ದಾರೂ ಮನೆಯಲ್ಲಿ ಸಾವು ಉಂಟಾದರೆ ಅವರ ಮನವಿ ಮೇರೆಗೆ ಈ ಸಂಚಾರಿ ವಾಹನವನ್ನು ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

ವೇವೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕ ಇಲ್ಲ. ಸಂಚಾರಿ ವಾಹನದಲ್ಲಿ ಶವ ಸುಡುವ ಮೊದಲ ಮಾಡಬೇಕಾದ ಎಲ್ಲ ಧಾರ್ಮಿಕ ವಿಧಿಗಳನ್ನು ಮಾಡಬಹುದಾಗಿದೆ. ಶವ ಸುಡುವಾಗ ಯಾವುದೇ ರೀತಿಯ ವಾಸನೆ, ಹೊಗೆ ಕೂಡ ಬರಲ್ಲ. ಉಕ್ಕಿನಿಂದ ತಯಾರು ಮಾಡಿರುವ ಚಿತಗಾರವು 6 ಅಡಿಯಷ್ಟು ಉದ್ದವಾಗಿದೆ. ಯಾರ ಮನೆಗೂ ಬೇಕಾದರೂ ಸಂಚಾರಿ ಚಿತಾಗಾರ ಸಾಗಿಸಬಹುದು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com