Breaking News

ಪಾರ್ಶ್ವ ತಾಡಾಸನ ಭಂಗಿ, ಪ್ರಯೋಜನ ಏನೇನು ತಿಳಿಬೇಕಾ.. ಈ ಲೇಖನ ಓದಿ

 

⇒ ಗೋಪಾಲಕೃಷ್ಣ ದೇಲಂಪಾಡಿ 

ಬೆನ್ನು, ಭುಜ ಹಾಗೂ ಕಾಲಿನ ಮಾಂಸ ಖಂಡಗಳು ಬಲಗೊಳ್ಳುವ  ಪಾರ್ಶ್ವ ತಾಡಾಸನಈ ಆಸನದಲ್ಲಿ ನಿಂತು ಕೊಂಡು ಎರಡು ಕೈಗಳನ್ನು ಮೇಲೆ ಮಾಡಿ ಪಾರ್ಶ್ವಕ್ಕೆ ಬಾಗುವ ಭಂಗಿ.

ಅಭ್ಯಾಸ ಕ್ರಮ: ಜಮಾಖಾನ ಹಾಸಿದ ನೆಲದ ಮೇಲೆ ಪ್ರಥಮವಾಗಿ ತಾಡಾಸನ ಭಂಗಿಗೆ ಬರಬೇಕು. ಅನಂತರ ಕಾಲುಗಳಲ್ಲಿ ಎರಡು ಅಡಿಗಳಷ್ಟು ಅಂತರವಿರಿಸಬೇಕು, ಆಮೇಲೆ ಎರಡು ಕೈಗಳ ಬೆರಳುಗಳನ್ನು ಹೆಣೆದು ಕೊಂಡು ಶಿರಸಿನ ಮೇಲಕ್ಕೆ ತರಬೇಕು. ಉಸಿರನ್ನು ಒಳಕ್ಕೆ ತೆಗೆದುಕೊಂಡು ಆಮೇಲೆ ಉಸಿರನ್ನು ಬಿಡುತ್ತ ಸೊಂಟದ ಮೇಲ್ಭಾಗದಿಂದ ಬಲಕ್ಕೆ ಭಾಗಿಸಬೇಕು.

  1.  

ಈ ಸ್ಥಿತಿಯಲ್ಲಿ 5 ಸಮ ಉಸಿರಾಟವನ್ನು ನೆಡೆಸುತ್ತ ಇದ್ದು ಆಮೇಲೆ ಉಸಿರನ್ನು ತೆಗೆದುಕೊಳ್ಳತ್ತಾ ಮೊದಲಿನ ಸ್ಥಿತಿಗೆ ಬರಬೇಕು ಆಮೇಲೆ ಉಸಿರನ್ನು ಬಿಡುತ್ತಾ ಎಡಪಾರ್ಶ್ವಕ್ಕೆ ಭಾಗ ಬೇಕು ಇಲ್ಲಿ 5 ಸಮ ಉಸಿರಾಟ ನಡೆಸಬೇಕು. ಈ ರೀತಿ ಎರಡು ಯಾ 3 ರೀತಿ ಅಭ್ಯಾಸ ಮಾಡಬೇಕು. ಈ ಸಂದರ್ಭದಲ್ಲಿ ದೇಹವನ್ನು ಬಿಗಿಗೊಳಿಸದೆ ಹಾಯಾಗಿ ಅಭ್ಯಾಸ ಮಾಡಬೇಕು. ಆರಂಭದಲ್ಲಿ ಕಲಿಯುವಾಗ ಸಾಧ್ಯಾವಾಗುವಷ್ಟೇ ಬಾಗಬೇಕು.

ಯೋಗ ಸಾಧನೆಯ ಮೂರನೇಯ ಮೆಟ್ಟಿಲು ‘ಆಸನ’ “ಸ್ಥಿರಂ, ಸುಖಂ, ಆಸನಂ’ ಅಂದರೆ ಸ್ಥಿರವಾದ, ಸುಖಕರವಾದ, ಶರೀರದ ವಿವಿಧ ಭಂಗಿಗಳು ಯಾ ಸ್ಥಿತಿಗಳು ಯೋಗಾಸನಗಳೆನಿಸಿವೆ.  ಇಲ್ಲಿ ದೇಹವನ್ನು ಶಿಸ್ತು ಬದ್ಧವಾಗಿ, ಕ್ರಮವತ್ತಾಗಿ, ನಿಧಾನವಾಗಿ, ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು, ತಿರುಗಿಸುವುದು, ಚಲಿಸುವಿಕೆ ಇತ್ಯಾದಿ ಮಾಡುವುದರಿಂದ ದೇಹದ ಒಳಗಿನ ಅಂಗಗಳಿಗೂ, ಮಾಂಸಖಂಡಗಳಿಗೂ ನರಮಂಡಲಕ್ಕೂ ಪ್ರಚೋದನೆ ಮತ್ತು ವಿಶ್ರಾಂತಿ ದೊರಕಿ ರಕ್ತ ಪರಿಚಲನೆ, ಪಚನಕ್ರಿಯೆ ಇತ್ಯಾದಿ ಸಮರ್ಪಕವಾಗಿ ನಡೆಯುವುದಲ್ಲದೆ ನರಮಂಡಲವೂ ಮಾಂಸಖಂಡಗಳೂ ಪೆಡಸಾಗಿರದೆ ಶಕ್ತಿಯುತವಾಗುವವು ಮತ್ತು ಚೈತನ್ಯ ಭರಿತವಾಗುವುವು.

ಪ್ರಯೋಜನಗಳು: ತುಂಬಾ ಹೊತ್ತು ಕುಳಿತು ಕೊಂಡು ಕೆಲಸ ನಿರ್ವಹಿಸುವರಿಗೆ ಸಹಜವಾಗಿ ಕಾಡುವ ಬೆನ್ನು, ಸೊಂಟ ನೋವು ಹಾಗೂ ಬಿಗಿತ ಇರುವರಿಗೆ ಈ ಆಸನ ಉಪಯುಕ್ತವಾಗಿದೆ. ಈ ಆಸನದಲ್ಲಿ ಬೆನ್ನು ಭುಜ ಹಾಗೂ ಕಾಲಿನ ಮಾಂಸ ಖಂಡಗಳು ಬಲಗೊಳ್ಳುತ್ತದೆ. ಈ ಆಸನದಿಂದ ಸೊಂಟ, ಬೆನ್ನು ಹಾಗೂ ತೊಡೆಗಳು ಹದಗೊಳ್ಳುತ್ತದೆ. ಈ ರೀತಿ ತೂಗಾಡುವ ಚಲನೆಯಿಂದ ಒಂದು ರೀತಿ ಹಗುರವಾದ ಭಾವನೆ ಮೂಡುತ್ತದೆ ಸಾಮಾನ್ಯ ದಿನದ ಯಾವುದೇ ಹೊತ್ತಿನಲ್ಲಿ ಅಭ್ಯಾಸ ಮಾಡ ಬಹುದು ದೈಹಿಕ ಮಾನಸಿಕ ಬಿಗುವಿನಿಂದ ಬಿಡುಗಡೆ ಹೊಂದಲು ಈ ಆಸನ ಸಹಕಾರಿ ಮೂಲಧಾರ ಮತ್ತು ಮಣಿಪುರ ಸುಸ್ಥಿತಿಗೆ ಸಹಕಾರಿಯಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com