Breaking News

ಅಳಿಯೂರಿನಲ್ಲಿ  ಉಚಿತ ಆರೋಗ್ಯ ತಪಾಸಣಾ ಶಿಬಿರ

 

ಮೂಡುಬಿದಿರೆ: ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸಹಯೋಗದಲ್ಲಿ ಅಳಿಯೂರಿನ ಹೇಮಾ ಸಭಾಭವನದಲ್ಲಿ  ಉಚಿತ ಆರೋಗ್ಯ ತಪಸಣಾ ಶಿಬಿರ ಶನಿವಾರ ನಡೆಯಿತು.

ಮಿಥುನ್ ರೈ ಸಹೋದರ ಖ್ಯಾತ ಹೃದಯ ತಜ್ಞ ಡಾ| ಮನೀಷ್ ರೈ ಆರೋಗ್ಯ ತಪಾಸಣಾ ಶಿಬಿರವನ್ನು  ಉದ್ಘಾಟಿಸಿ

ಮಾತನಾಡಿ ಇತ್ತೀಚಿನ ದಿನಗಳಲ್ಲಿ  ಹೃದಯಾಘಾತಕ್ಕೆ ಒಳಗಾಗುವವರ ಮತ್ತು ಇದರಿಂದ ಸಾವನ್ನಪ್ಪುವವರ ಸಂಖ್ಯೆಯು ದಿನದಿಂದ ದಿನಕ್ಕೆ  ಹೆಚ್ಚುತ್ತಿದೆ. ಯುವಜನರು ಸಹಿತ ಮಕ್ಕಳು ಕೂಡಾ ಹೆಚ್ಚು ಹೃದಯಾಘಾತಗಳಿಗೆ ಬಲಿಯಾಗುತ್ತಿರುವುದು ವಿಷಾಧನೀಯ. ಸಾಮಾನ್ಯ ಜನರು ತಮಗೆ ಯಾವುದೇ ಕಾಯಿಲೆಗಳಲ್ಲವೆಂದೇ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವನ್ನು ತೋರದೆ ಮುಂಚಿತವಾಗಿ ಆರೋಗ್ಯ ತಪಾಸಣೆಯನ್ನು ನಡೆಸಿ, ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿಬೇಕೆಂದ ಅವರು ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುವ ಕೆಟ್ಟ ಚಟಗಳಿಂದ ದೂರವಿರಿಸಿ ಹಾಗೂ ವಾಕಿಂಗ್ ಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಂದು ಸಲಹೆ ನೀಡಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಹಳ್ಳಿಯ ಜನರಿಗೆ ಮಂಗಳೂರಿಗೆ ತೆರಳಿ ಆರೋಗ್ಯ ತಪಾಸಣೆಯನ್ನು ನಡೆಸಲು ಕಷ್ಟವಾಗುತ್ತದೆಂಬ ಉದ್ದೇಶದಿಂದ ಮಿಥುನ್ ರೈ ನೇತೃತ್ವದಲ್ಲಿ ಅವರ ಸಹೋದರ ಮನೀಶ್ ರೈ ಉಪಸ್ಥಿತಿಯಲ್ಲಿ  ಕೆ.ಎಂ.ಸಿ ಆಸ್ಪತ್ರೆಯ ವೈದ್ಯರುಗಳನ್ನು ಕರೆಸಿ ತಪಾಸಣೆಯನ್ನು ನಡೆಸಲಾಗುತ್ತಿದೆ.  ಜನರು ಆರೋಗ್ಯದ ಬಗ್ಗೆ ಅಸಡ್ಡೆಯನ್ನು ತೋರದೇ ತಪಾಸಣೆ ನಡೆಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

  1.  

ಶಿಬಿರದ ನೇತೃತ್ವವನ್ನು ವಹಿಸಿದ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಜನಸಾಮಾನ್ಯರು ಪ್ರಾಥಮಿಕ ಆರೋಗ್ಯ ತಪಾಸಣೆಯನ್ನು ಹೆಚ್ಚಿನ ಜನರು ಮಾಡಿಸಿರುವುದಿಲ್ಲ. ಶುಗರ್, ಬಿ.ಪಿ, ಕೊಲೆಸ್ಟಾçಲ್, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಲಿ ಅಥವಾ ಇನ್ನೀತರ ಸಾಮಾನ್ಯ ತೊಂದರೆಗಳಿದ್ದರೆ ಅವುಗಳನ್ನೆಲ್ಲಾ ತಪಾಸಣೆ ನಡೆಸಿ ಸೂಕ್ತ ಪರಿಹಾರಗಳನ್ನು ಪಡೆದು ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಿ ಎಂದು ಸಲಹೆಯಿತ್ತರು.

ಶಿರ್ತಾಡಿ ಗ್ರಾ.ಪಂ ಅಧ್ಯಕ್ಷ ಸಂತೋಷ್ ಕೋಟ್ಯಾನ್ , ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಪ್ರವೀಣ್ ಜೈನ್, ಎ.ಪಿ.ಎಂ.ಸಿ ಸದಸ್ಯ ಚಂದ್ರಹಾಸ ಸನಿಲ್, ಕಾಂಗ್ರೆಸ್ ಮುಖಂಡ ವಸಂತ ಬೆರ್ನಾಡ್, ಹೇಮಾ ಸಭಾಭವನದ ಮಾಲಕರಾದ ಹೇಮಾವತಿ ಹಾಗೂ ಕೆ.ಕೆ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 

ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನವನ್ನು ಪಡೆದುಕೊಂಡರು.

ಬಾಕ್ಸ್ :   ಉಚಿತ ಅರೋಗ್ಯ ತಪಾಸಣೆ ಶಿಬಿರಕ್ಕೆ ಅರೋಗ್ಯ ತಪಾಸಣೆಗೆ ಬಂದಿದ್ದ ಶಿರ್ತಾಡಿಯ ಧನಕೀರ್ತಿ ಎಂಬವರನ್ನು ಖ್ಯಾತ ಹೃದಯ ತಜ್ಞ ಡಾ ಮನೀಶ್ ರೈ ಅವರು ತಪಾಸಣೆ ನಡೆಸುವ ವೇಳೆ ಹೃದಯದ ತೊಂದರೆ ಇರುವ ವಿಷಯ ಗೊತ್ತಾಗಿದ್ದು ತಕ್ಷಣ ಅವರನ್ನು ಶಿರ್ತಾಡಿ ಪ್ರವೀಣ್ ಕುಮಾರ್ ಜೈನ್ ಉಸ್ತುವಾರಿಯ ಆಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಕರೆದೋಯ್ಯುವ ವ್ಯವಸ್ಥೆ ಮಾಡಲಾಯಿತು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com