Breaking News

ಭಾರತೀಯ ಸೇನೆ ಸೇರ ಬಯಸುವರಿಗೆ ವೃತ್ತಿ ಮಾರ್ಗದರ್ಶನ, ತರಬೇತಿಗಾಗಿ ಅರ್ಜಿ ಆಹ್ವಾನ

 

ಕಾರವಾರ: ಭಾರತೀಯ ಸೇನೆ ಅಥವಾ ಇತರೆ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಬಾಲಕರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅತವಾ ಇಲಾಖೆ ವೆಬ್ ಸೈಟ್ https://bcwd.karnataka.gov.in ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  1.  

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಾಮಾನ್ಯ ಅರ್ಹತೆಗಳು ಅಗತ್ಯವಿದ್ದು, ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ ಶೇ 33 ಅಂಕಗಳನ್ನು ಪಡೆದಿರಬೇಕು. ಗ್ರೆಡಿಂಗ್ ಸಿಸ್ಟಮ್ ಇದ್ದಲ್ಲಿ ಮೇಲ್ಕಂಡಂತೆ ಸಮಾನ ಗ್ರೇಡ್ ಪಡೆದಿರಬೇಕು. ವಯೋಮಿತಿ ಡಿಸೆಂಬರ್ 31, 2023ಕ್ಕೆ ಅನ್ವಯಿಸುವಂತೆ ಅಭ್ಯರ್ಥಿ ವಯಸ್ಸು 17 ವರ್ಷದಿಂದ 20 ವರ್ಷಗಳ ವಯಸ್ಸಿನ ಒಳಗಿರಬೇಕು. ಅರ್ಜಿ ಸಲ್ಲಿಸಲು ಫೆಬ್ರುವರಿ 15, ಕೊನೆಯ ದಿನ ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗೆ ಸಹಾಯವಾಣಿ ಮೊಬೈಲ್ 805077000 ಸಂಪರ್ಕ ಮಾಡಬಹುದು. ದಕ್ಷಿಣ ಕನ್ನಡ ಜಿಲ್ಲೆ: ದೂ. ಸಂ. 0824-2225078, ) ಉಡುಪಿ ಜಿಲ್ಲೆಯ ದೂ. ಸಂ 0820-2574881, ಉತ್ತರ ಕನ್ನಡ: ದೂ.ಸಂ. 08382-226589 ಸಂಖ್ಯೆ ಸಂಪರ್ಕ ಮಾಡಬಹುದು. (ಸಮಯ ಬೆಳಗ್ಗೆ 10.00 ರಿಂದ ಸಂಜೆ 5.30ರವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ) ಎಂದು ಪ್ರಕಟಣೆ ತಿಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com