Breaking News

10 ಬೋಟ್ ನಿರ್ಮಾಣ: ತ್ರಿಪಕ್ಷೀಯ ಒಡಂಬಡಿಕೆಗೆ ಸಹಿ

 

ಉಡುಪಿ: ಕೊಚಿನ್ ಶಿಪ್‌ ಯಾರ್ಡ್ ಲಿಮಿಟೆಡ್‌ ಅಧೀನ ಸಂಸ್ಥೆ ಮಲ್ಪೆ ಉಡುಪಿ ಕೊಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ವತಿಯಿಂದ 14 ಕೋಟಿ ರೂಪಾಯಿ ಮೌಲ್ಯದ 10 ಆಳ ಸಮುದ್ರ ಮೀನುಗಾರಿಕಾ ಬೋಟ್ ನಿರ್ಮಾಣಕ್ಕೆ ಕೇರಳ ರಾಜ್ಯ ಮೀನುಗಾರಿಕಾ ಇಲಾಖೆ ಹಾಗೂ ಕೇರಳದ ಐದು ಸ್ಥಳೀಯ ಮೀನುಗಾರಿಕಾ ಸ್ವಸಹಾಯ ಸಂಘಗಳ ನಡುವೆ ತ್ರಿಪಕ್ಷೀಯ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ಕೇರಳ ಸರಕಾರದ ಮೀನುಗಾರಿಕಾ ಇಲಾಖೆ ನಿರ್ದೇಶಕ ಡಾ. ಅದೀಲಾ ಅಬ್ದುಲ್ಲ, ಯುಸಿಎಸ್‌ಎಲ್‌ ಸಿಇಒ ಹರಿಕುಮಾರ್ ಎ.ಎ. ಹಾಗೂ ಹಾಗೂ ವಿವಿಧ ಸ್ವಸಹಾಯ ಗುಂಪುಗಳಿಗೆ ಸೇರಿದ ಐವರು ಮೀನುಗಾರರು ಕೊಚಿನ್ ಶಿಪ್‌ ಯಾರ್ಡ್ ಲಿಮಿಟೆಡ್‌ನಲ್ಲಿ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

  1.  

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಯೋಜನೆ ಮಾರ್ಗಸೂಚಿಗೆ ಅನುಗುಣವಾಗಿ ಆಳ ಸಮುದ್ರ ಮೀನುಗಾರಿಕೆಗಾಗಿಯೇ ಈ ವಿಶೇಷ ಬೋಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ನೇವಿಗೇಶನ್ ಮತ್ತು ಸಂಪರ್ಕ ಸಂವಹನದ ಆಧುನಿಕ ವ್ಯವಸ್ಥೆಯ ಜಿಪಿಎಸ್, ಅಟೋಮೇಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್, ಫಿಶ್ ಫೈಂಡರ್, ಮ್ಯಾಗ್ನೆಟಿಕ್ ಕಂಪಾಸ್ ವ್ಯವಸ್ಥೆಯನ್ನು ಈ ಮೀನುಗಾರಿಕಾ ಬೋಟ್‌ಗಳಿಗೆ ಅಳವಡಿಸಲಾಗುತ್ತದೆ.

22.7 ಮೀಟರ್ ಉದ್ದ ಹಾಗೂ 6.4ಮೀ. ಅಗಲವುಳ್ಳ 12 ಜನರ ಸಾಮರ್ಥ್ಯದ ಈ ಹಡಗುಗಳು ಗರಿಷ್ಠ ಎಂಟು ನಾಟ್ಸ್ ವೇಗದಲ್ಲಿ ಚಲಿಸಬಲ್ಲವು. ಮೀನುಗಾರಿಕೆಗಾಗಿ ಈ ಬೋಟ್‌ಗಳಲ್ಲಿ ಲಾಂಗ್ ಲೈನರ್ ವಿಂಚ್, ಗಿಲ್ ನೆಟ್ ಹೌಲರ್‌ಗಳಿದ್ದು, ಉತ್ಪಾದಕತೆ ಹೆಚ್ಚಳ, ಸುರಕ್ಷತೆ ಮತ್ತು ಮೀನುಗಾರ ಸಮುದಾಯದ ಬದುಕಿನ ಉನ್ನತಿಗೆ ಪೂರಕವಾಗಿರಲಿವೆ ಎಂದು ಇಲಾಖೆ ತಿಳಿಸಿದೆ.

  1.  

Leave a Reply

Your email address will not be published. Required fields are marked *