Breaking News

ಭೇಟಿ ಬಚಾವೋ ಹೇಳಿಕೆಗೆ ಮಾತ್ರ ಸಿಮೀತ: ಮಮತಾ ಗಟ್ಟಿ ಆರೋಪ

 

ಕರಾವಳಿ ಡೈಲಿನ್ಯೂಸ್

ಮಂಗಳೂರು: ಜಿಲ್ಲೆಯಲ್ಲಿ  ಹೆಚ್ಚುವರಿ ಮಹಿಳಾ ಪೊಲೀಸ್ ಠಾಣೆ ಮಂಜೂರಾತಿ ಮಾಡುವಂತೆ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಗುರುವಾರ

ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮೀ ಕಾರ್ಯಕ್ರಮದ ಮೂಲಕ ಪ್ರತಿ ಕುಟುಂಬದ ಗೃಹಿಣಿಗೆ ಮಾಸಿಕ  ರೂಪಾಯಿ 2,000  ಭತ್ಯೆ ನೀಡಲಿದ್ದೇವೆ.  ಪ್ರತಿ ಕುಟುಂಬಕ್ಕೆ ವಾರ್ಷಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ವಿಶೇಷ ಯೋಜನೆಯನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಸ್ವಾಗತಿಸಲಿದೆ ಎಂದರು.

  1.  

ಭೇಟಿ ಬಚಾವೋ ಎಂದು ಪ್ರಧಾನಿ ಘೋಷಣೆ ಮಾತ್ರ ಮಾಡಿದ್ದಾರೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಮಹಿಳಾ ಸುರಕ್ಷತೆಗಾಗಿ ಮೀಸಲಿಟ್ಟ ನಿರ್ಭಯಾ ಯೋಜನೆಯ ಹಣವನ್ನು ಸರಿಯಾಗಿ ಬಳಸದೇ ಬೇರೆ ಯೋಜನೆಗಳಿಗೆ ಬಳಸಲಾಗುತ್ತಿದೆ. ಮದ್ಯಪಾನದ ದುಷ್ಪರಿಣಾಮದ ಅರಿವಿದ್ದರೂ ಮದ್ಯ ಸೇವಿಸಲು 21 ವಯೋಮಾನದ ಮಿತಿಯನ್ನು 18ವರ್ಷಕ್ಕೆ ಇಳಿಸಿ ಮನೆಯ ಮಹಿಳೆಯರು ಇನ್ನಷ್ಟು ಸಂಕಷ್ಟಕ್ಕೆ ಈಡಾಗುವಂತೆ ಮಾಡಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಹಿಳೆಯರಿಗಾಗಿ ಜಾರಿ ಮಾಡಿದ್ದ ಯೋಜನೆಗಳನ್ನು ಬಿಜೆಪಿ ನೇತೃತ್ವದ ಸರಕಾರ ನಿರ್ಲಕ್ಷಿಸಿದೆ. ಮಡಿಲು, ಮನಸ್ವಿನಿ,ಮಾತೃ ಪೂರ್ಣ ಯೋಜನೆ,ಸ್ತ್ರೀಶಕ್ತಿ ಯೋಜನೆ, ಸ್ವ ಸಹಾಯ ಸಂಘಗಳ ಬಡ್ಡಿ ಮನ್ನಾ ಯೋಜನೆಯ ಮೂಲಕ ಮಹಿಳೆಯರಿಗೆ ನೆರವು ನೀಡಿದೆ ಎಂದರು.

ಜ. 29 ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸ ಬೇಕೆಂದು ಮಮತಾ ಗಟ್ಟಿ ಕೋರಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಸುರೇಖಾ ಚಂದ್ರ ಹಾಸ್, ಮಲ್ಲಿಕಾ ಪಕ್ಕಳ, ಚಂದ್ರ ಕಲಾ, ಚಂದ್ರಿಕಾ ರೈ, ಸಬೀತಾ ಮಿಸ್ಕಿತ್, ತನ್ವಿರ್ ಶಾ, ಶಾಂತಳಾ ಗಟ್ಟಿ ಇದ್ದರು

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com