Breaking News

ಸಾರ್ವಜನಿಕ ಜಾಗೃತಿಗಾಗಿ ಅಂಬುಲೆನ್ಸ್ ಗೆ ದಾರಿ ಬಿಡಿ ವಿಡಿಯೊ ಬಿಡುಗಡೆ

 

ಕರಾವಳಿ ಡೈಲಿನ್ಯೂಸ್

ಮಂಗಳೂರು: ನಗರ ಸಂಚಾರ ಪೊಲೀಸ್ ಆಶ್ರಯದಲ್ಲಿ ಸಹಯೋಗದಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆ ಸಾರ್ವಜನಿಕ ಜಾಗೃತಿದ ಅಂಗವಾಗಿ ಅಂಬುಲೆನ್ಸ್ಗೆ ದಾರಿ ಬಿಡಿ (ಮೇಕ್ ವೇ ಫಾರ್ ದಿ ಅಂಬುಲೆನ್ಸ್) ಎಂಬ ವಿಡಿಯೊ ಬಿಡುಗಡೆ ಮಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ನಡೆಯಿತು.

ಈ ವಿಡಿಯೊವನ್ನು ಮಂಗಳೂರು ನಗರ (ಸಂಚಾರ) ಪೊಲೀಸ್ ಸಹಾಯಕ ಕಮೀಷನರ್ ಗೀತಾ ಕುಲಕರ್ಣಿ ಅವರು ಬಿಡುಗಡೆ ಮಾಡಿದರು. ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜ್ನ ಡೀನ್ ಡಾ. ಬಿ. ಉನ್ನಿಕೃಷ್ಣನ್, ಮಂಗಳೂರಿನ ಕೆಎಂಸಿ ಆಸ್ಪತ್ರೆ ಮುಖ್ಯ ಪ್ರಾದೇಶಿಕ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಖಿ, ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಜೀಧು ಆರ್. ಇದ್ದರು.

  1.  

ತುರ್ತು ಸ್ಥಿತಿಗಳ ಸಂದರ್ಭದಲ್ಲಿ ಅಂಬುಲೆನ್ಸ್ಗಳಿಗೆ ದಾರಿ ಮಾಡಿಕೊಡುವುದರೊಂದಿಗೆ ಎಲ್ಲರಿಗೂ ನೆರವಾಗುವಂತಹ ಸಂಚಾರ ನಡವಳಿಕೆಯನ್ನು ಸಾರ್ವಜನಿಕರಲ್ಲಿ ಉಂಟು ಮಾಡುವ ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ಕೆಎಂಸಿ ಆಸ್ಪತ್ರೆ ಗ್ರಾಫಿಕ್ಸ್ ಮೂಲಕ ಈ ವಿಡಿಯೊ ತಯಾರಿಸಿದೆ.
ಮಂಗಳೂರು ನಗರ (ಸಂಚಾರ) ಪೊಲೀಸ್ ಸಹಾಯಕ ಕಮಿಷನರ್ ಗೀತಾ ಕುಲಕರ್ಣಿ ಅವರು ಮಾತನಾಡಿ, `ಜ.11 ರಿಂದ 17 ರವರಿಗೆ ಪ್ರತಿವರ್ಷ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಯೋಜಿಸಲಾಗುತ್ತಿದೆ. ರಸ್ತೆ ಸುರಕ್ಷತೆ ಕುರಿತು ಜಾಗೃತಿ ಹರಡುವ ಉದ್ದೇಶವನ್ನು ಈ ಸಪ್ತಾಹ ಹೊಂದಿದೆ. ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಇದು ಪ್ರಮುಖ ಕಾಳಜಿ ವಿಷಯವಾಗಿದೆ. ಸಾರ್ವಜನಿಕ ಜಾಗೃತಿ ವಿಡಿಯೊವನ್ನು ಬಿಡುಗಡೆ ಮಾಡುವುದರೊಂದಿಗೆ ಈ ಉದಾತ್ತ ಕ್ರಮವನ್ನು ಕೆಎಂಸಿ ಆಸ್ಪತ್ರೆ ಕೈಗೆತ್ತಿಕೊಂಡಿರುವುದು ನನಗೆ ಬಹಳ ಸಂತೋಷ ತಂದಿದೆ ಎಂದರು.

ಜನರ ಜೀವಗಳನ್ನು ಉಳಿಸುವ ತುರ್ತು ಸೇವೆಗಳ ಕುರಿತು ಹೆಚ್ಚಿನ ಜಾಗೃತಿಯನ್ನು ಸಾಮಾನ್ಯ ಜನರು ಪಡೆದುಕೊಳ್ಳಲು ಈ ಕಾರ್ಯಕ್ರಮ ಸಹಕಾರಿ ಆಗಿದೆ ಎಂದು ಹೇಳಿದರು.
ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜ್ನ ಡೀನ್ ಡಾ. ಬಿ. ಉನ್ನಿಕೃಷ್ಣನ್ ಅವರು ಮಾತನಾಡಿ, ತುರ್ತು ವೈದ್ಯಕೀಯ ಸೇವೆಗಳು, ಆರೋಗ್ಯ ಸೇವಾ ವ್ಯವಸ್ಥೆಯ ಅಗತ್ಯ ವಿಭಾಗ ಆಗಿವೆ. ಈ ಸೇವೆಗಳು ಸಮಯಕ್ಕೆ ಸರಿಯಾಗಿ ಮತ್ತು ಸೂಕ್ತ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ಪೂರೈಸಬಲ್ಲವು. ಹಲವು ರೀತಿಯ ತುರ್ತು ವೈದ್ಯಕೀಯ ಸೇವೆಗಳ ಪೈಕಿ ಅಂಬುಲೆನ್ಸ್ ಸೇವೆ ಕೂಡ ಅತ್ಯಂತ ಅಗತ್ಯ. ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣದ ವೈದ್ಯಕೀಯ ಸಹಾಯವನ್ನು ಇವು ಪೂರೈಸುತ್ತವೆ. ತುರ್ತು
ಸಂದರ್ಭಗಳಲ್ಲಿ ಸಾರ್ವಜನಿಕರಲ್ಲಿ ಸೂಕ್ತ ರೀತಿಯ ವಾಹನ ಸಂಚಾರ ನಡಾವಳಿಕೆ ಪ್ರದರ್ಶಿಸಬೇಕು ಎಂದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಪ್ರಾದೇಶಿಕ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಖಿ ಅವರು ಮಾತನಾಡಿ, “ಕೆಎಂಸಿ ಆಸ್ಪತ್ರೆ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಮಂಗಳೂರು ನಗರ ಸಂಚಾರ ಪೊಲೀಸರು ಕೈಜೋಡಿಸಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಕೆಲ ತುರ್ತು ವೈದ್ಯಕೀಯ ಸೇವೆ ನೀಡಬೇಕಾದಾಗ ಸಂಚಾರ ಪೊಲೀಸರು ಸಹಕಾರ ಅಗತ್ಯ ಎಂದು ಹೇಳಿದರು.
ಸಮಯಕ್ಕೆ ಸರಿಯಾಗಿ ಆರೋಗ್ಯ ಸೇವೆ ನೀಡುವುದು ವ್ಯಕ್ತಿಯ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಬಹಳಷ್ಟು ವ್ಯತ್ಯಾಸ ಉಂಟು ಮಾಡಬಲ್ಲದು. ರೋಗಿ ಯೋಗಕ್ಷೇಮದ ಖಾತ್ರಿ ಮಾಡಿಕೊಳ್ಳಲು ಕೆಎಂಸಿ ಆಸ್ಪತ್ರೆ ಯಾವಾಗಲೂ ಎಲ್ಲಾ ಕ್ರಮಕೈಗೊಳ್ಳಲಿದೆ ಎಂದು ಸಿದ್ಧಿಖಿ ಹೇಳಿದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಜೀಧು ಆರ್. ಅವರು ಮಾತನಾಡಿ, ಮಕ್ಕಳ ಮತ್ತು ವಯಸ್ಕರ ತುರ್ತು ಆರೋಗ್ಯ ಸ್ಥಿತಿಗಳನ್ನು ನಿಭಾಯಿಸಲು ಮಂಗಳೂರಿನ ಕೆಎಂಸಿ ಆಸ್ಪತ್ರೆ ತುರ್ತು ವಿಭಾಗದಲ್ಲಿ ಹಗಲಿರುಳೂ ಅಗತ್ಯ ಕ್ರಮ ವಹಿಸಲಾಗಿದೆ. ಹಿರಿಯ ವೈದ್ಯರು, ಅನುಭವಿ ಅರೆವೈದ್ಯಕೀಯ ಸಿಬ್ಬಂದಿ ಮತ್ತು ತೀವ್ರ ಆರೈಕೆ ಸೇವೆ ನೀಡಲು ಆಸ್ಪತ್ರೆ ಸದಾ ಸಿದ್ದ ಎಂದರು.

ತುರ್ತು ಸೇವೆಗಾಗಿ ಜನರು ಮಂಗಳೂರಿನ ಕೆಎಂಸಿ ಆಸ್ಪತ್ರೆ ದೂರವಾಣಿ ಸಂಖ್ಯೆ 0824 – 2222227 ಸಂಪರ್ಕ ಮಾಡಬಹುದು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com