Breaking News

ಮಂಗಳೂರು ನವ ಬಂದರಿಗೆ ‘ದಿ ವರ್ಲ್ಡ್’ ಆಗಮನ: ಅದ್ಧೂರಿ ಸ್ವಾಗತ

 

ಮಂಗಳೂರು: ನವಮಂಗಳೂರು ಬಂದರ್‌ಗೆ ಹೊಸ ವರ್ಷದ ಮೊದಲ ಪ್ರಯಾಣಿಕರ ಹಡಗು ‘ದಿ ವರ್ಲ್ಡ್’ ಆಗಮಿಸಿದೆ.

ದುಬೈನಿಂದ  ಭಾರತಕ್ಕೆ ಮುಂಬೈ, ಗೋವಾ ಮೂಲಕ ಸಾಗಿ ಬಂದಿರುವ ‘ದಿ ವರ್ಲ್ಡ್’ ಕೊಚ್ಚಿನ್ ಬಂದರಿಗೆ ಹೋಗುವ ಮಾರ್ಗದಲ್ಲಿ ನವಮಂಗಳೂರು ಬಂದರ್‌ಗೆ ತಲುಪಿದೆ.

‘ದಿ ವರ್ಲ್ಡ್’ ನಲ್ಲಿ 123 ಪ್ರಯಾಣಿಕರು  ಮತ್ತು 280 ಸಿಬ್ಬಂದಿ ಇದ್ದಾರೆ. ಹಡಗನ್ನು ಬರ್ತ್ ಸಂಖ್ಯೆ ನಾಲ್ಕರಲ್ಲಿ ಲಂಗರ್ ಹಾಕಿ ನಿಲ್ಲಿಸಲಾಗಿದೆ. ಇದೇ 15ರಂದು  ನೌಕಾಯಾನವನ್ನು ಮುಂದುವರಿಸಲಿದೆ.

  1.  

ಮಂಗಳೂರಿಗೆ ಬಂದಿರುವ ಹಡಗಿನ ಪ್ರಯಾಣಿಕರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಹಡಗಿನಲ್ಲಿ ಇರುವವರು ಮಂಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ದಿ ವರ್ಲ್ಡ್’ ಹಡಗು 196.35 ಮೀಟರ್ ಉದ್ದ ಹಾಗೂ 7.05 ಮೀಟರ್ ಡ್ರಾಫ್ಟ್ ಮತ್ತು ಅದರ ಸಾಗಿಸುವ ಸಾಮರ್ಥ್ಯ ಒಟ್ಟು 43,188 ಟನ್‌ ನಷ್ಟಿದೆ ಎಂದು ಎನ್‌ಎಂಪಿಟಿ  ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

  1.  

Leave a Reply

Your email address will not be published. Required fields are marked *