Breaking News

ಒಡಿಯೂರು ತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ. ವಸಂತಕುಮಾರ ಪೆರ್ಲ ಆಯ್ಕೆ

 

ಕರಾವಳಿ ಡೈಲಿನ್ಯೂಸ್

ಒಡಿಯೂರು: ಇದೇ 30 , 31 ರಂದು ಒಡಿಯೂರಿನಲ್ಲಿ ಜರುಗಲಿರುವ 23ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಆಯ್ಕೆಯಾಗಿದ್ದಾರೆ.

ನಮ್ಮ ನೆಲ, ನಮ್ಮ ಜಲ ಎಂಬ ಪರಿಕಲ್ಪನೆ ಅಡಿಯಲ್ಲಿ ಜರಗಲಿರುವ ಸಮ್ಮೇಳನದಲ್ಲಿ ವಿಚಾರ ಸಂಕಿರಣ, ವಿವಿಧ ಜಾನಪದ ನೃತ್ಯಸ್ಪರ್ಧೆಗಳು ಜರಗಲಿವೆ.

  1.  

ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಜನೆ, ದುತ್ತೈತ ಎಂಬ ಕವನ ಸಂಕಲನಗಳು, ಮುನ್ನುಡಿಗಳ ಸಂಕಲನವಾದ ಮದಿಪುದ ಪಾತೆರೊಲು, ಅನುವಾದಿತ ಸಂಕಲನ ರಬೀಂದ್ರ ಕಬಿತೆಲು, ತುಳುಕಾವ್ಯೊ ಎಂಬ ಸಾಹಿತ್ಯ ಚರಿತ್ರೆ, ಪ್ರಾತಿನಿಧಿಕ ತುಳು ಕಬಿತೆಲು, ಆಕಾಶವಾಣಿ ತುಳು ಕತೆಕ್ಕುಲು, ಇಂಚಿಪೊದ ತುಳು ಕಬಿತೆಲು, ಕಬಿತೆ-2017 ಮುಂತಾದ ಸಂಪಾದಿತ ಕೃತಿಗಳಿಂದ ಪ್ರಸಿದ್ಧರಾಗಿರುವ ಡಾ. ಪೆರ್ಲ ಅವರು ಕನಕದಾಸರ ಮೋಹನ ತರಂಗಿಣಿ, ವಚನ ಸಾಹಿತ್ಯ ಮೊದಲಾದವುಗಳನ್ನು ತುಳುವಿಗೆ ಅನುವಾದಿಸಿದ್ದಾರೆ.

ರಾಷ್ಟ್ರೀಯ ಮಟ್ಟದ ಹಲವು ಸಮ್ಮೇಳನಗಳಲ್ಲಿ ತುಳುವನ್ನು ಪ್ರತಿನಿಧಿಸಿದ್ದಾರೆ. ಇವರ ಹಲವು ತುಳು ಕೃತಿಗಳು ದೇಶದ ಇತರ ಭಾಷೆಗಳಿಗೆ ಅನುವಾದ ಆಗಿವೆ.

ನೂರಾರು ತುಳು ಕಾರ್ಯಕ್ರಮಗಳನ್ನು ಸಂಘಟಿಸಿರುವರಲ್ಲದೆ ನೂರಾರು ಮಂದಿ ಕವಿ-ಲೇಖಕರನ್ನು ಪ್ರೋತ್ಸಾಹಿಸಿ ಬರವಣಿಗೆಯ ಕಾಯಕಕ್ಕೆ ಹಚ್ಚಿದ್ದಾರೆ. ಉತ್ತಮ ವಿಮರ್ಶಕರಾಗಿ ವಾಗ್ಮಿಗಳಾಗಿ ಹೆಸರಾಗಿರುವ ಡಾ. ಪೆರ್ಲ ಅವರು ಮಂಗಳೂರು ಆಕಾಶವಾಣಿಯ ಮೂಲಕ ತುಳುವಿಗೆ ಭದ್ರ ಬುನಾದಿ ಹಾಕಿಕೊಡುವಲ್ಲಿ ಶ್ರಮಿಸಿದವರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com