Breaking News

ಗುತ್ತಿಗೆದಾರರ ಸಮಸ್ಯೆಗಳಿಗೆ  ಸ್ಪಂದಿಸುವಂತೆ ಡಿಸಿಗೆ ಮಾಧವ ನಾಯಕ್ ನೇತೃತ್ವದ ನಿಯೋಗದ ಮನವಿ 

 

ಕರಾವಳಿ ಡೈಲಿನ್ಯೂಸ್

ಕಾರವಾರ: ತಾಲ್ಲೂಕಿನಲ್ಲಿ ಗುತ್ತಿಗೆದಾರರು ಜೆಲ್ಲಿಕಲ್ಲು, ಉಸುಕು ಹಾಗೂ ಇನ್ನಿತರ ಸಾಮಗ್ರಿಗಳ ಬಗ್ಗೆ ಎದುರಿಸುತ್ತಿರುವ ಸಮಸ್ಯೆ ಹಾಗೂ ಮರಳು ತೆಗೆಯಲು ಮತ್ತು ಸಾಗಣೆ ಮಾಡಲು ಪರವಾನಗಿ ನೀಡುವ ಮೊದಲು ಸಭೆ ನಡೆಸಬೇಕು ಎಂದು ಕಾರವಾರ ತಾಲ್ಲೂಕು ನೋಂದಾಯಿತ ಗುತ್ತಿಗೆದಾರರ ಸಂಘವು ಮಂಗಳವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಅವರಿಗೆ ಮನವಿ ಸಲ್ಲಿಸಿದೆ.

ಕಾರವಾರ ತಾಲ್ಲೂಕಿನಲ್ಲಿ ಮೇ ತಿಂಗಳಿನಿಂದ ಮರಳು ಸಮಸ್ಯೆ ತೀವ್ರವಾಗಿದೆ. ಅನಾನುಕೂಲದ ಬಗ್ಗೆ ತಮ್ಮ ಗಮನಕ್ಕೂ ತರಲಾಗಿತ್ತು, ಆದರೆ ಇನ್ನೂ ಕೂಡ ಸಮಸ್ಯೆ ಈಡೇರಿಲ್ಲ. ಮೂರು ತಿಂಗಳಿಂದ ಕ್ವಾರಿಗಳು ಹಾಗೂ ಕ್ರಷರ್ ಗಳು ಸ್ಥಗಿತವಾಗಿದ್ದರಿಂದ ಗುತ್ತಿಗೆದಾರರು ಯಾವುದೇ ಕಾಮಗಾರಿಗಳನ್ನು ಮಾಡದಂತಹ ಸ್ಥಿತಿ ಇದೆ. ಅರೆಬರೆ ಆದಂತಹ ಕಾಮಗಾರಿಗಳಿಗೂ ಕಚ್ಚಾ ಸಾಮಗ್ರಿಗಳಾದ ಜೆಲ್ಲಿಕಲ್ಲು, ಮರಳು ಸಿಗದೇ ಸ್ಥಗಿತ ಮಾಡುವಂತಹ ಸ್ಥಿತಿ ಬಂದಿದೆ ಎಂದು ಕಾರವಾರ ತಾಲ್ಲೂಕು ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ್ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಇನ್ನೂ ಹೊಸ ಕಾಮಗಾರಿಗಳಿಗೆ ಬೇಕಾದ ಅಗತ್ಯ ಸಾಮಗ್ರಿಗಳು ಸರಳ ರೀತಿಯಲ್ಲಿ ಸಿಗುವಂತೆ ಜಿಲ್ಲಾಡಳಿಯ ಗುತ್ತಿಗೆದಾರರಿಗೆ ವ್ಯವಸ್ಥೆ ಮಾಡಬೇಕು. ಜಲ್ಲಿಕಲ್ಲು, ಹಾಗೂ ಮರಳಿನ ಅಲಭ್ಯತೆಯಿಂದ ಸಮಸ್ಯೆ ಉಂಟಾದ ಅವಧಿಯನ್ನು ಯಾವುದೇ ದಂಡ ವಿಧಿಸದೇ ಗುತ್ತಿಗೆದಾರರಿಗೆ ಹೆಚ್ಚಿನ ಅವಧಿ ನೀಡುವಂತೆ ಸಂಭಂದಿಸಿದ ಇಲಾಖೆಗೆ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು. ಇಲ್ಲದೇ ಇದ್ದಲ್ಲಿ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಮಾಧವ ನಾಯಕ ಮನವಿಯಲ್ಲಿ ತಿಳಿಸಿದ್ದಾರೆ.

  1.  

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮರಳು ಹೇರಳವಾಗಿ ಲಭ್ಯತೆ ಇದ್ದು, ಕಾಳಿ ಮತ್ತು ಅರಬ್ಬಿ ಸಮುದ್ರದಲ್ಲಿ ಮರಳಿನ ರಾಶಿಯೇ ಸಂಗ್ರಹವೇ ಇದೆ. ಉಸುಕು ವ್ಯವಸ್ಥಿತವಾಗಿ ತೆಗೆಯದೇ ಇರುವುದರಿಂದ ದಿಬ್ಬಗಳು ನಿರ್ಮಾಣವಾಗಿ ನೆರೆ ಬಂದು ಅಕ್ಕಪಕ್ಕದ ಗ್ರಾಮ ಹಾಗೂ ಮನೆಗಳಿಗೆ ನೀರು ನುಗ್ಗುವ ಭೀತಿ ಇದೆ. ಆದ್ದರಿಂದ ಕೂಡಲೇ ಉಸುಕು ತೆಗೆಯುವುದಕ್ಕೆ ಪರವಾನಗಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಗುತ್ತಿಗೆದಾರರ ಸಂಘ, ಬಿಲ್ಡರ್ ಅಸೋಸಿಯೇಷನ್. ಸರಕು ಸಾಗಣೆ ಆಟೋ. ಟೆಂಪೊ ಸಂಘ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಆರ್ ಟಿಒ ಅಧಿಕಾರಿಗಳು ಒಳಗೊಂಡು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಉಸುಕು ಸಾಗಣೆ ಹಾಗೂ ತೆಗೆಯಲು ಕಾನೂನು ಸರಳಗೊಳಿಸಬೇಕು. ಎಲ್ಲರಿಗೂ ಮರಳು ಮುಕ್ತವಾಗಿ ಸಿಗಬೇಕು‌ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ 10 ಟನ್ ಗಿಂತ ಕಡಿಮೆ ಹಾಗೂ ಅದಕ್ಕಿಂತ ಹೆಚ್ಚು ಸಾಗಣೆ ಮಾಡಲು ಪರವಾನಗಿ ನೀಡದೇ ಇರುವುದರಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುವಂತಹ ಮಾಫಿಯಾ ಹುಟ್ಟಿಕೊಂಡಿವೆ. ಸಾಮಾನ್ಯ ಜನರು ಸಣ್ಣ ಕಾಮಗಾರಿಗಳನ್ನು ನಡೆಸಲು ಒಂದು ಟನ್ ಎರಡು ಟನ್ ಮರಳು ಬೇಕಾದರೂ 10 ಟನ್ ಮರಳು ಪರ್ಮಿಟ್ ಪಡೆಬೇಕಾದ ಸ್ಥಿತಿ ಇದೆ. ಈ ಕಾನೂನು ಕೂಡಲೇ ಬದಲಾಗಬೇಕು. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಆಸ್ಪದ ನೀಡಬಾರದು. ಸಣ್ಣ ಪ್ರಮಾಣದ ಸಾಗಣೆಗೆ ಅವಕಾಶ ನೀಡುವುದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಜತೆಗೆ ಅಕ್ರಮ ಸಾಗಣೆಗೆ ಕಡಿವಾಣ ಹಾಕಬಹುದು ಎಂದು ಮನವಿಯಲ್ಲಿ ಕಾರವಾರ ತಾಲ್ಲೂಕು ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ್ ತಿಳಿಸಿದ್ದಾರೆ.

ಅನಿಲ್ ಕುಮಾರ್ ಮಾಳ್ಸೇಕರ್, ಚತ್ರಪತಿ ಮಾಳ್ಸೇಕರ್, ಮನೋಜ್ ಕುಮಾರ್ ನಾಯ್ಕ್ ಹಳಗಾ ಪ್ರಸಾದ್ ಕಣೇಕರ್, ರಾಜೇಶ್ ಶೇಟ್, ನಿತೀನ್ ಕೊಲ್ಮಕರ್, ರವೀಂದ್ರ , ರೋಹಿದಾಸ್ ಕೋಟಾರ್ಕರ್, ಸಾಗರ್ ದೇವರಸ್, ಪ್ರಶಾಂತ್ ಎಸ್, ನಾಯ್ಕ್, ಸತೀಶ್ ವಿ ನಾಯ್ಕ್, ಪ್ರೀತಂ ಮಾಸುರಕರ್, ಬಿಲ್ಡಿಂಗ್ ಅಸೋಸಿಯೇಷನ್ ಸದಸ್ಯ ದಿನೇಶ್ ನಾಯ್ಕ್, ವಿವೇಕ್ ಭೂಮ್ಕರ್, ಗಿರಿಶ್ ದೇಸಾಯಿ, ವಿನೋದ್ ಎಸ್ ಸೇರಿದಂತೆ ಹಲವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ನಿಯೋಗದಲ್ಲಿ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com