Breaking News

ಕುಡ್ಲದಲ್ಲಿ ಮೆಗಾ ಸೈಕ್ಲೋಥಾನ್ ಜಾಥಾ: ಸೈಕ್ಲಿಸ್ಟ್ ಗಳ ಕಲರವ

 

ಕರಾವಳಿ ಡೈಲಿನ್ಯೂಸ್ 

ಮಂಗಳೂರು: ಕುಡ್ಲದಲ್ಲಿ ಭಾನುವಾರ ನಡೆದ ಮೆಗಾ ಸೈಕ್ಲೋಥಾನ್ ಜಾಥಾ ಉತ್ಸಾಹಿ ಸೈಕ್ಲಿಸ್ಟ್‌ಗಳ ಸೈಕಲ್‌ಗಳಿಂದ ಮೊಳಗಿದ ಬೆಲ್‌ ರಿಂಗಣದ ಸದ್ದು ಎಲ್ಲೆಡೆ ಮನೆ ಮಾಡಿತ್ತು.

 

ಸೈಕ್ಲಿಂಗ್ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಸಂಬಂಧ ಮಂಗಳೂರಿನ ಸೈಕ್ಲಿಂಗ್ ಕ್ಲಬ್, ವಿ ಆರ್ ಸೈಕ್ಲಿಂಗ್, ಹೀರೋ ಸೈಕಲ್ಸ್, ಐಡಿಯಲ್ ಐಸ್ ಕ್ರೀಮ್, ಕಶಾರ್ಪ್ ಫಿಟ್ ನೆಸ್ ಮತ್ತು ತಾಜ್ ಸೈಕಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಮಂಗಳೂರಿನ ಮಂಗಳಾ ಸ್ಟೇಡಿಯಂ ಎದುರು ವಿವಿಧ ಶಾಲೆಗಳ ಮಕ್ಕಳು, ಪೋಷಕರು, ಸೈಕ್ಲಿಸ್ಟ್‌ಗಳು ಬೆಳಿಗ್ಗೆ 1,060 ಸೈಕ್ಲಿಸ್ಟ್‌ಗಳು ಜಮಾಯಿಸಿದ್ದರು.

ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸೈಕ್ಲಿಂಗ್ ಧಿರಿಸಿನಲ್ಲಿಯೇ ಬಂದು  ಮೆಗಾ ಸೈಕ್ಲೋಥಾನ್ ಜಾಥಾಕ್ಕೆ ಚಾಲನೆ ನೀಡಿದರು.

  1.  

ಸಹಾಯಕ ಪೊಲೀಸ್ ಕಮಿಷನರ್ (ಸಂಚಾರ) ಗೀತಾ ಕುಲಕರ್ಣಿ, ಐಡಿಯಲ್ ಐಸ್ ಕ್ರೀಂ ಮಾಲೀಕ ಮುಕುಂದ್ ಕಾಮತ್ , ಕಶರ್ಪ್ ಫಿಟ್‌ನೆಸ್ ಮಾಲೀಕ ಆನಂದ್ ಪ್ರಭು, ಏರಿಯಾ ಮ್ಯಾನೇಜರ್, ಹೀರೋ ಸೈಕಲ್ಸ್ ಏರಿಯಾ ಮ್ಯಾನೇಜರ್ ಇಮ್ತಿಯಾಜ್ ಸೈಕ್ಲಿಂಗ್ ಜಾಥಾದಲ್ಲಿ ಇದ್ದರು.

ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ, ಪರಿಸರ ಹಾಗೂ ಫಿಟ್‌ನೆಸ್‌ ಹಿಡಿತ ಸಾಧಿಸಲು ಸೈಕ್ಲಿಂಗ್ ಉತ್ತಮವಾಗಿದೆ. ಸೈಕ್ಲಿಂಗ್ ಮೂಲಕ ಸದೃಢ ಮನಸ್ಸು ಆರೋಗ್ಯ ಸಾಧಿಸಬಹುದು. ಸಂಚಾರ ಸಮಸ್ಯೆಗೆ ಸೈಕಲ್ ಬಳಕೆ ಅತಿ ಅವಶ್ಯ. ಪರಿಸರ ಸ್ನೇಹಿ ಜೀವನ ಆಹ್ಲಾದಕರ ಬದುಕಿಗೆ ಸೈಕ್ಲಿಂಗ್ ಅಭ್ಯಾಸ ಮಾಡಿಕೊಳ್ಳುವುದು ಅಗತ್ಯ ಎಂದರು.

ಸೈಕಲ್ ಜಾಥಾವು ಮಂಗಳಾ ಸ್ಟೇಡಿಯಂ, ಲೇಡಿಹಿಲ್, ಸಿಟಿ ಕಾರ್ಪೊರೇಷನ್, ಪಿವಿಎಸ್, ಬಂಟ್ಸ್ ಹಾಸ್ಟೆಲ್, ಜ್ಯೋತಿ ಸರ್ಕಲ್, ಹಂಪನಕಟ್ಟೆ, ಕ್ಲಾಕ್ ಟಾವರ್ ಮೂಲಕ ಸಾಗಿ ಬಂದು, ಎಂಜಿ ರೋಡ್ ಲೇಡಿ ಹಿಲ್ ಮತ್ತು ಕೆನರಾ ಸ್ಕೂಲ್, ಉರ್ವಾ ಗ್ರೌಂಡ್‌ನಲ್ಲಿ ಜಾಥಾ ಸಂಪನ್ನ ಗೊಂಡಿತು.

ಮಂಗಳೂರಿನ ಎಜೆ ಆಸ್ಪತ್ರೆ ಅಂಬುಲೆನ್ಸ್ ಮತ್ತು ತಾಜ್ ಸೈಕಲ್ಸ್ ಒದಗಿಸಿದ ಎಲೆಕ್ಟ್ರಿಕ್ ಬ್ಯಾಕ್‌ಅಪ್ ವಾಹನ ಸವಾರರ ಸುರಕ್ಷತೆಗೆ ಸಹಕಾರವಾಯಿತು.

ವಿವಿಧ ಜಂಕ್ಷನ್‌ಗಳಲ್ಲಿ ನಿಂತಿದ್ದ 50ಕ್ಕೂ ಹೆಚ್ಚು ಸಂಖ್ಯೆಯ ಸ್ವಯಂಸೇವಕರು ಸೈಕ್ಲಿಸ್ಟ್‌ಗಳಿಗೆ ಮಾರ್ಗದಲ್ಲಿ ಮಾರ್ಗದರ್ಶನ ನೀಡಿದರು. ಸಂಚಾರ ಪೊಲೀಸ್ ತಂಡವು ಸವಾರರಿಗೆ ಮಾರ್ಗದರ್ಶನ ನೀಡಿದರು.

ವಿ ಆರ್ ಸಿ ಸದಸ್ಯ ಬಂಟಿ ರಾಜ್, ಲಕ್ಷ್ಮಿ ಕ್ಲಾತ್ ಸ್ಟೋರ್ಸ್‌ ಮಾಲೀಕರು ಸೈಕ್ಲಿಂಗ್ ನಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗಾಗಿ ವಿಶೇಷವಾಗಿ ಲಕ್ಕಿ ಡ್ರಾ ಸ್ಪರ್ಧೆಗಳಲ್ಲಿ ವಿಜೇತ 5 ಸೈಕ್ಲಿಸ್ಟ್‌ಗಳಿಗೆ ಉಡುಗೊರೆ ನೀಡಿದರು.

ಹೀರೋ ಸೈಕಲ್‌, ಐಡಿಯಲ್ ಐಸ್‌ಕ್ರೀಮ್, ಕಾಶರ್ಪ್ ಫಿಟ್‌ನೆಸ್, ತಾಜ್ ಸೈಕಲ್‌, ಐರಿಸ್-ಪಿಕ್ಸೆಲ್, ಕೆನರಾ ಬ್ಯಾಂಕ್, ಲಕ್ಷ್ಮಿ ಕ್ಲಾತ್ ಸ್ಟೋರ್‌, ಇಂಪ್ರೊಕ್ಸ್ ಇಂಜಿನಿಯರ್‌ಗಳು/ಟಾಟಾ ಪವರ್‌ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿತ್ತು

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com