Breaking News

ಕೋಟ: ಪಂಚವರ್ಣ ಸಂಸ್ಥೆ, ರೈತರೆಡೆಗೆ ನಮ್ಮನಡಿಗೆ ಕಾರ್ಯಕ್ರಮ

 

ಕೋಟ: ಕೃಷಿ ಕಾಯಕದಲ್ಲಿ ಯುವ ಸಮೂಹಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಸಾಮಾಜ ಸೇವಕಿ ಮಣೂರು ಭಾರತಿ ಮಯ್ಯ ಹೇಳಿದರು.

ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ,ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಸರಣಿ 21ನೇ ಮಾಲಿಕೆ ಕಾರ್ಯಕ್ರಮದಲ್ಲಿ ಮಣೂರು ಪರಿಸರದ ಯುವ ಕೃಷಿಕ ರೂಪೇಶ್ ಶೆಟ್ಟಿ ಸನ್ಮಾನಿಸುವ ಸಮಾರಂಭದಲ್ಲಿ ಮಾತನಾಡಿದರು.

ನಾವು ಎಲ್ಲೆ ವಾಸ್ತವ್ಯ ಇದ್ದರೂ ರೈತ ಬೆಳೆದ ಆಹಾರವನ್ನೆ ಸೇವಿಸಬೇಕು. ಅಂತಹ ರೈತನಿಗೆ ಗೌರವ ನೀಡಬೇಕಾದದ್ದು ನಮ್ಮೆಲ್ಲ ಆದ್ಯ ಕರ್ತವ್ಯವಾಗಬೇಕು ಈ ದಿಸೆಯಲ್ಲಿ ಪಂಚವರ್ಣ ಸಂಸ್ಥೆಯ ಕಾರ್ಯ ಶ್ಲಾಘನೀಯ ನಿರಂತರ ಸಾಮಾಜಿಕ ಕಾರ್ಯದಲ್ಲಿ ನಿರತವಾದ ಈ ಸಂಸ್ಥೆ ಇನ್ನಷ್ಟು ಸೇವೆ ವಿಸ್ತರಿಸಲಿ ಎಂದು ಹಾರೈಸಿದರು.

  1.  

ಕೃಷಿ ಉಳಿಯಬೇಕಾದರೆ ಯುವಸಮೂಹ ಕೃಷಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಪಳಗಬೇಕು ,ಕೃಷಿ ಇದ್ದರೆ ಮಾತ್ರ ನಮ್ಮ ಉಸಿರು ಇರಲು ಸಾಧ್ಯ, ಆ ಮೂಲಕ ಕೃಷಿ ಕ್ಷೇತ್ರವನ್ನು ಗಟ್ಟಿಗೊಳಿಸವಂತ್ತಾಗಬೇಕು ಸರಕಾರ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಿ ಇದನ್ನು ಮುಂದಿನ ತಲೆಮಾರಿಗೆ ಕೊಂಡ್ಯೊಯುವಂತೆ ಮಾಡಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮಣೂರು ಭಾಸ್ಕರ ಶೆಟ್ಟಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಯುವ ಕೃಷಿಕ ರೂಪೇಶ್ ಶೆಟ್ಟಿ ಮಣೂರು ಇವರನ್ನು ಕೃಷಿ ಪರಿಕರದೊಂದಿಗೆ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.

ಕೋಟ ಗ್ರಾಮ ಪಂಚಾಯತ್ ಸದಸ್ಯ ಶಿವರಾಮ ಶೆಟ್ಟಿ, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ .ಜಯರಾಮ ಶೆಟ್ಟಿ, ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಪೂಜಾರಿ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ ಇದ್ದರು. ಪಂಚವರ್ಣದ ಉಪಾಧ್ಯಕ್ಷ ಮನೋಹರ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.
ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತಾ ಬಾಯರಿ ನಿರೂಪಿಸಿದರು. ಪಂಚವರ್ಣ ಉಪಾಧ್ಯಕ್ಷ ರವೀಂದ್ರ ಜೋಗಿ ವಂದಿಸಿದರು. ಕಾರ್ಯಕ್ರಮವನ್ಮು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಕಾರ್ಯಕ್ರಮದಲ್ಲಿ ಯುವ ಕೃಷಿಕ ರೂಪೇಶ್ ಶೆಟ್ಟಿ ಮಣೂರು ಇವರನ್ನು ಕೃಷಿ ಪರಿಕರದೊಂದಿಗೆ ಗೌರವಿಸಲಾಯಿತು. ಸಾಮಾಜಸೇವಕಿ ಮಣೂರು ಭಾರತಿ ಮಯ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮಣೂರು ಭಾಸ್ಕರ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com