Breaking News

ತಂತ್ರಜ್ಞಾನ ಬಳಕೆ ಬಗ್ಗೆ ತರಬೇತಿ ಅಗತ್ಯ: ವಸಂತ ಸಾಲಿಯಾನ್

 

ಬ್ರಹ್ಮಾವರ: ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರಗಳು ಗ್ರಾಮೀಣ ಭಾಗದ ಮಹಿಳೆಯರಿಗೆ ವೇದಿಕೆ ಕಲ್ಪಿಸುವ, ದುಡಿವ ಕೈಗಳಿಗೆ ಕೆಲಸ ಕೊಡುವ, ತಂತ್ರಜ್ಞಾನದ ಬಳಕೆ ಬಗ್ಗೆತರಬೇತಿ, ಮಾಹಿತಿ ನೀಡುವ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ಮಾಡುತ್ತಿದೆ ಎಂದು ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಹೇಳಿದರು.

ಬಾರ್ಕೂರಿನ ಶಿವಗಿರಿ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬ್ರಹ್ಮಾವರ ತಾಲ್ಲೂಕು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

  1.  

ಬಾರ್ಕೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಮಾಹೆಯ ಡಾ.ಪ್ರತಿಮಾ ಜಯಪ್ರಕಾಶ್ ಆಚಾರ್ಯ ಮಹಿಳಾ ಸಬಲೀಕರಣದ ಬಗ್ಗೆಮಾಹಿತಿ ನೀಡಿದರು. ಇದೇ ಸಂದರ್ಭ ಗಿಳಿಯಾರು ಯಕ್ಷಿ ಜ್ಞಾನವಿಕಾಸ ಕೇಂದ್ರ ಮತ್ತುಕೆಂಜೂರಿನ ಅಮರ ಜ್ಞಾನ ವಿಕಾಸ ಕೇಂದ್ರವನ್ನು ತಾಲ್ಲೂಕಿನ ಮಾದರಿ ಕೇಂದ್ರವನ್ನಾಗಿ ಗುರುತಿಸಲಾಯಿತು.

ಸಾಧಕ ಮಹಿಳೆ ಯರಾದ ಸುಜಾತಾ ಪಾರಂಪಳ್ಳಿ ಮತ್ತುರೇವತಿ ಹೇರಾಡಿ ಅವರನ್ನು ಗೌರವಿಸಲಾಯಿತು. ಎರಡು ನೂತನ ಜ್ಞಾನವಿಕಾಸ ಕೇಂದ್ರಗಳ ದಾಖಲಾತಿ ಹಸ್ತಾಂತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಪ್ರಗತಿಪರ ಕೃಷಿಕ ಕೂಡ್ಲಿಶ್ರೀನಿವಾಸ ಉಡುಪ, ಜನಜಾಗೃತಿ ವೇದಿಕೆ ನಿರ್ಮಲಾ ಇದ್ದರು.

ಯೋಜನಾಧಿಕಾರಿ ದಿನೇಶ್ ಶೇರಿಗಾರ ಸ್ವಾಗತಿಸಿದರು. ಜ್ಞಾನವಿಕಾಸದ ತಾಲ್ಲೂಕು ಸಮನ್ವಯಾಧಿಕಾರಿ ನೇತ್ರಾವತಿ ವರದಿ ವಾಚಿಸಿದರು. ಬಾರ್ಕೂರು ವಲಯದ ಮೇಲ್ವಿಚಾರಕಿ ಬಾಬಿ ವಂದಿಸಿದರು. ಕೃಷಿ ಮೇಲ್ವಿಚಾರಕ ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com