Breaking News

ಬಾಂಬ್ ಬೆದರಿಕೆ ಇಮೇಲ್: ಶಾಲೆಯಲ್ಲಿ ಆತಂಕ!

 

ಬೆಂಗಳೂರು: ಇಲ್ಲಿನ ರಾಜಾಜಿನಗರದ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ಗೆ (ಎನ್‌ಪಿಎಸ್‌) ಖಾಸಗಿ ಶಾಲೆಗೆ ಬಾಂಬ್‌ ಇಟ್ಟಿರುವ ಬೆದರಿಕೆ ಇಮೇಲ್‌ ಸಂದೇಶ ಬಂದಿದ್ದು, ಶಾಲಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಪರಿಣಾಮ ಶಾಲಾ ಆಡಳಿತ ಶಾಲಾ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಸ್ಥಳಕ್ಕೆ ಬಸವೇಶ್ವರನಗರ, ರಾಜಾಜಿನಗರ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ. ಬಾಂಬ್‌ ಪತ್ತೆ ದಳ, ಶ್ವಾನ ದಳ ಪರಿಶೀಲನೆ ನಡೆಸಿದಾಗ ಯಾವುದೇ ಬಾಂಬ್‌ ಅಥವಾ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

  1.  

ತಪಾಸಣೆ ಬಳಿಕ ಇದೊಂದು ಹುಸಿ ಬಾಂಬ್‌ ಇಮೇಲ್‌ ಎಂದು ಪರಿಗಣಿಸಲಾಗಿದೆ. ಇಮೇಲ್‌ನಲ್ಲಿ ಶಾಲೆಯ ಕಾರಿಡಾರ್‌ನಲ್ಲಿ ನಾಲ್ಕು ಜಿಲ್ಯಾಟಿನ್‌ ಕಡ್ಡಿಗಳನ್ನು ಇಟ್ಟಿರುವುದಾಗಿ ಹೇಳಲಾಗಿತ್ತು. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಕೂಡ ಇಂತಹದೇ ಘಟನೆ ಬೆಂಗಳೂರಿನ ಡಿಕೆ ಶಿವಕುಮಾರ್ ಅವರ ಒಡೆತನದ ಶಾಲೆಯಲ್ಲಿಯೂ ಘಟನೆ ನಡೆದಿತ್ತು. ಅದು ಕೂಡ ಇದೇ ರೀತಿ ಹುಸಿ ಬಾಂಬ್ ಇಟ್ಟಿರುವ ಬಗ್ಗೆ ಇಮೇಲ್ ಕಳುಹಿಸಲಾಗಿತ್ತು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com