Breaking News

ಕೋಮುವಾದದ ಮೂಲ ಬೇರು ಕರಾವಳಿ: ಸಿದ್ದರಾಮಯ್ಯ

 

ಮಂಗಳೂರು: ಕೋಮುವಾದ ಮೂಲ ಬೇರು ಕರಾವಳಿ. ದೇಶದ ಸಂವಿಧಾನದ ಮೇಲೆ ವಿಶ್ವಾಸ ಇಲ್ಲದೇ ಇರುವವರು ಜನಪ್ರತಿನಿಧಿಗಳಾಗಲು ಅರ್ಹರಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ ಎಸ್ ಎಸ್ ಗೆ ಮಾತ್ರ ಮುಖ್ಯಮಂತ್ರಿಯಲ್ಲ. ಏಳು ಕೋಟಿ ಜನರ ಪ್ರತಿನಿಧಿ ಅನ್ನೋದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದರು.

ಗುರುವಾರ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

  1.  

ಕರಾವಳಿ ಕೋಮುವಾದದ ಪ್ರಯೋಗ ಶಾಲೆ ಆಗಿದೆ. ಎಲ್ಲ ಕಡೆಗಳಲ್ಲಿಯೂ ಹಿಂದೂತ್ವವನ್ನು ತರಲಾಗುತ್ತಿದೆ. ಯಕ್ಷಗಾನ ಕಲೆಗೂ ಹಿಂದೂತ್ವ ನಂಟು ಬೇಸೆಯುತ್ತಾರೆ. ಬಿಜೆಪಿ, ಆರ್ ಎಸ್ ಎಸ್ ಗೆ ಅದುವೇ ಬಂಡವಾಳ ಆಗಿಬಿಟ್ಟಿದೆ ಎಂದು ಹೇಳಿದರು.

ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಬೊಬ್ಬೆ ಹಾಕಿದಾಗ ಮೋದಿ, ಅಮಿತ್ ಶಾ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಮೋದಿ, ಅಮಿತ್ ಷಾ‌ ಇಬ್ಬರು ಅನಂತ ಕುಮಾರ್ ಮೂಲಕ ಹೇಳಿಸಿದ್ದು ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.

ಶಾಸಕ ಯು.ಟಿ ಖಾದರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ,ಮಾಜಿ ಸಚಿವ ರಮಾನಾಥ ರೈ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com