Breaking News

ಶಾರದಾ ಕ್ಯಾಂಪಸ್ ನಲ್ಲಿ ಸಂಗೀತ ಸುಧೆಯ ಮೆರುಗು

 

 

ಕರಾವಳಿ ಡೈಲಿನ್ಯೂಸ್

ಮಂಗಳೂರು:  ಇಲ್ಲಿನ ಶಾರದಾ ವಿದ್ಯಾನಿಕೇತನ ಪಿಯು ಕಾಲೇಜಿನ ವತಿಯಿಂದ ಶಾಲೆಯ ವಿವೇಕಾನಂದ ಕ್ರೀಡಾಂಗಣದದಲ್ಲಿ  ವಿದ್ಯಾರ್ಥಿಗಳಿಂದ ಸಂಗೀತ ಸಂಜೆ  ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಸಂಗೀತ ಸುಧೆಯನ್ನು ಹಾಗೂ ನಾಟ್ಯ ಚಾತುರ್ಯವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ವೇದಘೋಷದೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ,ಜನಪದ, ಭಾವಗೀತೆ,ಕನ್ನಡ ,ಹಿಂದಿ ,ಮಲಯಾಳಿ, ತುಳು  ಇತ್ಯಾದಿ ಭಾಷೆಗಳ ಚಿತ್ರಗೀತೆ ,ಯಕ್ಷಗಾನ ಹೀಗೆ ಸಂಗೀತದ ಹಲವು ಮಜಲುಗಳನ್ನು ಪ್ರದರ್ಶಿಸಿದರು.

  1.  

ಕಾರ್ಯಕ್ರಮದ ಯಶಸ್ವಿಗೆ ಹಳೆಯ ವಿದ್ಯಾರ್ಥಿಗಳು ಪಕ್ಕವಾದ್ಯಗಳಾದ ವಯೋಲಿನ್, ಮೃದಂಗ   , ತಬಲ ,ಕೊಳಲಿನೊಂದಗೆ ಭಾಗವಹಿಸಿ ಸಹಕರಿಸಿದರು ಅಲ್ಲದೆ ಶಿಕ್ಷಕರ  ಭಾಗವಹಿಸುವಿಕೆಯು ಮೆರುಗು ನೀಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಸಂಗೀತ ಮತ್ತು ನಾಟ್ಯ ವಿದುಷಿ ಪ್ರೀತಿಕಲಾ ಮತ್ತು ಅವರ ಪತಿ ವಿದ್ವಾನ್ ದೀಪಕ್ ಕುಮಾರ್ ಭಾಗವಹಿಸಿ ಹಿತನುಡಿಯನ್ನು ನುಡಿದರು.  ಭಾವಗೀತೆ ಹಾಡಿ ಸಭೆ ರಂಜಿಸಿದರು.

 

ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ .ಬಿ .ಪುರಾಣಿಕ, ಸುನಂದ ಪುರಾಣಿಕ,  ಸಮೀರ್ ಪುರಾಣಿಕ ಅವರು ಕುಟುಂಬ ಸದಸ್ಯರ ಜತೆಗೆ ಕಾರ್ಯಕ್ರದಲ್ಲಿ ಸಂಭ್ರಮಿಸಿ ಹಾರೈಸಿ ಹಿತ ನುಡಿಗಳನ್ನು ಪ್ರೋತ್ಸಾಹದಾಯಕ ಮಾತುಗಳನ್ನು ಆಡಿ ವಿದ್ಯಾರ್ಥಿಗಳ ಬೆನ್ನು ತಟ್ಟಿದರು.

ನೆರೆದ ಸಂಗೀತ ಪ್ರೇಮಿಗಳು ಧನ್ಯತೆ ಭಾವದಲ್ಲಿ ಮಿಂದೆದ್ದರು.ಕಾರ್ಯಕ್ರಮದ ನೇತೃತ್ವ ಹಾಗೂ ಉಸ್ತುವಾರಿಯನ್ನು ಪಿ ಯು ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ ಜಿ ಹಾಗೂ ಸಿಬ್ಬಂದಿ, ಸಾಂಸ್ಕೃತಿಕ ಸಮಿತಿ ವಹಿಸಿಕೊಂಡಿತ್ತು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com