
ಮಂಗಳೂರು: ತಿರುವನಂತಪುರಂ ನಲ್ಲಿ ನಡೆದ 33ನೇ ದಕ್ಷಿಣ ವಲಯದ ಅಕ್ವೆಟಿಕ್ ಚಾಂಪಿಯನ್ ಷಿಪ್ ನಲ್ಲಿ4×100 ಫ್ರೀ ಸ್ಟೈಲ್ ಈಜು ರಿಲೇಯಲ್ಲಿ ಗ್ರೂಪ್ 2 ತಂಡವೂ ನೂತನ ಕೂಟ ದಾಖಲೆ ಮೆರೆದಿದೆ. ಮಂಗಳೂರಿನ ವಿ ಒ
ನ್ ಅಕ್ವಾ ಸೆಂಟರ್, ಸಂತ ಅಲೋಶಿಯಸ್ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿರುವ ನಿಶಾನ್ 4×100 ಫ್ರೀ ಸ್ಟೈಲ್ ಈಜು ರಿಲೇಯ ಗ್ರೂಪ್ 2 ತಂಡದಲ್ಲಿ ನೂತನ ಕೂಟ ದಾಖಲೆ ಪಡೆದುಕೊಂಡಿದ್ದಾನೆ ಎಂದು ವಿ ಒನ್ ಅಕ್ವಾ ಸೆಂಟರ್ ನ ಸಂತ ಅಲೋಶಿಯಸ್ ಕಾಲೇಜು ಈಜುಕೊಳದ ಮುಖ್ಯಸ್ಥ ನವೀನ್ ಅವರು ತಿಳಿಸಿದ್ದಾರೆ.


