Breaking News

ಮಲ್ಪೆ: ಗೋಳಿ ಮೀನು ಏಷ್ಟು ಬೆಲೆಗೆ ಮಾರಾಟ ಆಯಿತು ಗೊತ್ತಾ?

 

ಉಡುಪಿ (ಮಲ್ಪೆ): ಆಳ ಸಮುದ್ರ ಮೀನುಗಾರರ ಬಲೆಗೆ ಬಿತ್ತು ಭಾರೀ ಗಾತ್ರದ “ಗೋಳಿ ಮೀನು”; 2 ಲಕ್ಷಕ್ಕೂ ಅಧಿಕ ಬೆಲೆಗೆ ಹರಾಜು

ಉಡುಪಿ (ಮಲ್ಪೆ): ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಮೀನುಗಾರರ ಬಲೆಗೆ ಬಾರಿ ಗಾತ್ರದ ಮೀನು ಬಿದ್ದಿದೆ. 22 ಕೆ.ಜಿ ತೂಕ ಇದ್ದು,  ರೂಪಾಯಿ 2,34,080 ಕ್ಕೆ ಮಾರಾಟ ಆಗುವ ಮೂಲಕ ದಾಖಲೆ ಬರೆದಿದೆ.

  1.  

ಮಲ್ಪೆ ಬಂದರಿನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಸ್ಥಳೀಯವಾಗಿ “ಗೋಳಿ ಮೀನು” ಎಂದು ಕರೆಯಲ್ಪಡುವ ಬೃಹತ್ ಮೀನು ಬಲೆಗೆ ಸಿಕ್ಕಿದೆ.

ಕೊರೊನಾ ನಿರ್ಬಂಧದ ಬಳಿಕ‌ ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಯಥೇಚ್ಛ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಈ ಮಧ್ಯೆ ದುಬಾರಿ ಬೆಲೆಯ ಮೀನುಗಳು ಬಲೆಗೆ ಬೀಳುತ್ತಿದ್ದು, ಇದು ಸಹಜವಾಗಿಯೇ ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಈ ಮೀನು ಔಷಧಿ ತಯಾರಿಕೆಗೆ ಬಳಕೆಯಾಗುತ್ತದೆ ಎಂದು ಮೀನುಗಾರರು ಹೇಳಿದ್ದಾರೆ. ಮಲ್ಪೆ ಬಂದರಿನಲ್ಲಿ ಹರಾಜು ಹಾಕುವಾಗ ವೇಳೆ ವ್ಯಕ್ತಿಯೊಬ್ಬರು ಈ ದುಬಾರಿ ಮೀನನ್ನು ಖರೀದಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com