Breaking News

ಮನ:ಪರಿವರ್ತನೆ ಚಳವಳಿ ಆಳ್ವಾಸ್ ನಿಂದ ಶುರುವಾಗಲಿ: ಸಿಎಂ ಬೊಮ್ಮಾಯಿ

 

ಮಂಗಳೂರು (ಮೂಡುಬಿದಿರೆ): ವಿಶ್ವದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆಗಳು ನಡೆಯುತ್ತಿರುವುದು ಖೇದಕರ ಸಂಗತಿ. ಚರಿತ್ರೆ ಜತೆಗೆ ಚಾರಿತ್ರ್ಯ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯಂತ ವೇದಿಕೆ ಸಹಕಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಳಿದರು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿರುವ ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಂಸ್ಕೃತಿಕ ಹಾಗೂ ಕಣ್ಣಿ ಗೆ ಹಬ್ಬವನ್ನುಂಟು ಮಾಡುವ ಕಾರ್ಯಕ್ರಮ ಜಾಂಬೂರಿ ರಾಷ್ಟ್ರ ಶಕ್ತಿಯುತವಾಗಿ, ಸುಸಂಸ್ಕೃತವಾಗಿ, ಜಾಗತಿಕವಾಗಿ ಗಟ್ಟಿಗೊಂಡಿದೆ ಎಂಬುದು ಇಂದಿನ ಕಾರ್ಯಕ್ರಮದಿಂದ ತಿಳಿಯುತ್ತದೆ. ಪ್ರಧಾನಿ ಮೋದಿ ಅವರ ರಾಷ್ಟ್ರನಿರ್ಮಾಣದ ಕರೆಯನ್ನು ಸಾಕಾರಗೊಲಿಸುವ ಸಂಕಲ್ಪವನ್ನು ಇಲ್ಲಿ ಮಾಡಲಾಗಿದೆ ಎಂದರು.

  1.  

ಪಾಶ್ಚಿಮಾತ್ಯದ ದಾಳಿಯಿಂದ ಸಾಂಸ್ಕೃತಿಕ ಗೊಂದಲ ಯುವಪೀಳಿಗೆಗೆ ಉಂಟಾಗಿದೆ. ನಮ್ಮಲ್ಲೇನಿದೆ ಎಂಬುದನ್ನು ಮರೆಯುತ್ತಿದ್ದಾರೆ. ಪರೋಪಕಾರಿ ಧರ್ಮ, ದಯೆ, ಸತ್ಯಮಾರ್ಗಗಳನ್ನು ಮುಂದುವರೆಯುತ್ತಿದ್ದೇವೆ ಎಂಬುದು ತಿಳಿದುಕೊಳ್ಳಬೇಕು. ನಮ್ಮನ್ನೆಲ್ಲ ಒಂದುಗೂಡಿಸಿರುವುದು ಭಕ್ತಿಯ ಚಳವಳಿ. ಭಕ್ತಿಯ ಚಳವಳಿ ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ. ರಾಮಾಯಣ, ಶಂಕರಾಚಾರ್ಯರಿಂದ ಬಸವ, ಗಾಂಧೀಜೀ, ಅಂಬೇಡ್ಕರ್ ಅವರಿಗೆ ಅನೇಕ ಭಕ್ತಿ ಚಳವಳಿಗಳು ನಡೆದಿವೆ ಎಂದರು.

ಶಾಂತಿ ಪರಿಪಾಲನೆ, ಇನ್ನೊಬ್ಬರನ್ನು ಗೌರವದಿಂದ ಕಾಣುವುದನ್ನು ತಿಳಿಸುವುದೇ ಧರ್ಮ. ಆದರೆ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದ್ದು , ಇದು ಅಂತ್ಯದ ಆರಂಭ ಎಂಬುದು ನನ್ನ ಅನಿಸಿಕೆ. ಇದನ್ನು ತಡೆಗಟ್ಟುವ ಶಕ್ತಿ ಭಾರತಕ್ಕೆ ಮಾತ್ರ ಇದೆ. ಮನ:ಪರಿವರ್ತನೆ ಸಾಂಸ್ಕೃತಿಕ ಚಳವಳಿಗೆ ಕಾರಣವಾಗಿದ್ದು, ಇದನ್ನು ಆಳ್ವಾಸ್ ಸಂಸ್ಥೆ ಸಾಧ್ಯವಾಗಿಸುತ್ತಿದೆ. 21ನೇ ಶತಮಾನ, ಜ್ಞಾನದ ಶತಮಾನ. ಆಳ್ವಾಸ್ ಸಂಸ್ಥೆ ಸರಸ್ವತಿಯ ಮಂದಿರ ಎಂದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ,ಇಂಧನ ಸಚಿವ ಸುನಿಲ್ ಕುಮಾರ್, , ಶಾಸಕರಾದ ಸಿ.ಟಿ.ರವಿ, ಶ್ರೀಪತಿ ಭಟ್, ಅಖಿಲ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಜೆನರಲ್ ಸೆಕ್ರೆಟರಿ ಅನಿಲ್ ಜೈನ್ , ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯಸ್ಥ ಪಿ.ಜಿ.ಆರ್. ಸಿಂಧ್ಯಾ, ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವ ಸೇರಿದಂತೆ ಹಲವು ಗಣ್ಯರು ಇದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com