Breaking News

ಜನಾರ್ಧನ ಪೂಜಾರಿ ಅವರನ್ನಅವಮಾನಿಸಿದ್ರಾ? ಇದಕ್ಕೆ ಕೊಟ್ಟ ಸ್ಪಷ್ಟನೆ ಏನು? ಈ ಸುದ್ದಿ ಒಮ್ಮೆ ಓದಿ

 

ಮಂಗಳೂರು: ಕಾಂಗ್ರೆಸ್ ನ ಮುಖಂಡರಾದ ಪ್ರತಿಭಾ ಕುಳಾಯಿ ಅವರು ಚುನಾವಣೆ ಹೊತ್ತಿನಲ್ಲಿ ಬಿಲ್ಲವರ ವಿರೋಧ ಕಟ್ಟಿಕೊಂಡರಾ?  ವಿವಾದ ಜೇನು ಗೂಡಿಗೆ ಕಲ್ಲು ಹೊಡೆದ್ರಾ! ಬಿಲ್ಲವ ಸಮುದಾಯದ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರ ವಿರುದ್ಧ ಅವರು ಅವಹೇಳನದ ಮಾತನಾಡಿದ್ಡಾರೆ ಎನ್ನಲಾದ ಹೇಳಿಕೆ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ವಿವಾದ  ಏನು? ಈಚೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರ ನಿಯೋಗವು  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಧ್ಯಕ್ಷ ಸಲೀಂ ಅಹ್ಮದ ಅವರನ್ನು ಭೇಟಿ ಮಾಡಿ ಬಿಲ್ಲವರಿಗೆ  ಮುಂದಿನ  ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಉಭಯ ಜಿಲ್ಲೆಯಲ್ಲಿ ಸ್ಥಾನ ನೀಡಬೇಕೆಂದು ಮನವಿ ಸಲ್ಲಿಸಲು ತೆರಳಿತ್ತು.

ನಿಯೋಗದ ಮನವಿ ಆಲಿಸಿದ  ಸಲೀಂ ಅಹ್ಮದ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾರ್ಧನ ಪೂಜಾರಿ ಅವರು ಬಿಲ್ಲವರ ಪ್ರಭಲ ಸಮುದಾಯ ಇದ್ದಾಗಲೂ ಏಕೆ ಸೋತರು ಎಂಬ ಪ್ರಶ್ನೆಯನ್ನು ನಿಯೋಗದಲ್ಲಿ ಇದ್ದವರನ್ನು ಪ್ರಶ್ನೆ ಮಾಡಿದ್ದರು.

‘ಪದೇ ಪದೇ ಚುನಾವಣೆಯಲ್ಲಿ ಸೋತರು ‘ಮೂರು ಬಾರಿ ಪೂಜಾರಿ ಅವರಿಗೆ ಪಕ್ಷ  ಯಾಕೇ  ಟಿಕೆಟ್ ಕೊಟ್ಟಿತು? ಎಂದು ಪ್ರತಿಭಾ ಕುಳಾಯಿ ಅವರು ಸಲೀಂ ಅವರನ್ನು  ಪ್ರಶ್ನೆ ಮಾಡಿದ್ದರು.

‘ಜನಾರ್ಧನ ಪೂಜಾರಿ ಅವರು ನಮ್ಮ ರಾಷ್ಟ್ರ ನಾಯಕರು ಮತ್ತು ಹಣಕಾಸು ಸಚಿವರಾಗಿ ಇಡೀ ದೇಶದಾದ್ಯಂತ ಬಡವರ ಪರವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಹೈಕಮಾಂಡ್ ಅವವರಿ ಟಿಕೆಟ್ ಕೊಟ್ಟಿತ್ತು ಎಂದು ಕಾರ್ಯಾಧ್ಯಕ್ಷ  ಸಲೀಂ ಅಹ್ಮದ್ ನೀಯೋಗಕ್ಕೆ ತಿಳಿಸಿದ್ದರು.

  1.  

ಕುಳಾಯಿ ಹಾಗೂ ಅಲೀಂ ಅಹ್ಮದ್ ಅವರ ನಡುವೆ ನಡೆದ ಈ ಮಾತುಕತೆ ವಿವರವೇ ಈಗ  ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಪೂಜಾರಿ ಅವರನ್ನೇ ಪ್ರಶ್ನೆ ಮಾಡಿರುವ ಪ್ರತಿಭಾ ಕುಳಾಯಿ ಅವರ ವಿರುದ್ಧ ಪೂಜಾರಿ ಅವರ ಅಭಿಮಾನಿ ಬಳಗ ತಿರುಗಿ ಬಿದ್ದಿದೆ. ಒಂದು ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆ ಆಗಿ, ಎರಡನೇ ಬಾರಿ ಸೋತಿದ್ದರು ವಿಧಾನಸಭೆಗೆ ಟಿಕೆಟ್‌ ಗೆ ಅರ್ಜಿ ಹಾಕಿದ್ದಾರೆ. ಅಂತವರು ಪೂಜಾರಿ ಅವರ ಬಗ್ಗೆ  ಮಾತನಾಡಿರುವುದು ಅಕ್ಷಮ್ಯ. ಅವರು ಸಮಸ್ತ ಬಿಲ್ಲವರ ಕ್ಷಮೆ ಕೇಳಬೇಕು ಎಂದು  ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನಾರ್ಧನ ಪೂಜಾರಿ ಅಭಿಮಾನಿ ಬಳಗ ಪಟ್ಟು ಹಿಡಿದಿದೆ.

ಪ್ರತಿಭಾ ಕುಳಾಯಿ ಸ್ಪಷ್ಟನೆ:  ಜನಾರ್ಧನ ಪೂಜಾರಿ ಅವರು ನನಗೆ ತಂದೆಯ ಸಮಾನರು, ನಾನು ಯಾವುದೇ ರೀತಿಯಾಗಿ ಅವರನ್ನು ಅವಮಾನ ಮಾಡಿಲ್ಲ. ಈ ವಿಷಯವಾಗಿ ಅವರನ್ನು ಭೇಟಿಯೂ ಆಗಿದ್ದೇನೆ. ಈ ಬಗ್ಗೆ ನೀನೂ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡ, ಯಾರಾದ್ರೂ ಕೇಳಿದರೆ ಅದಕ್ಕೆ ನಾನು ಉತ್ತರ ಕೋಡುತ್ತೇನೆ ಎಂದು  ಸ್ವತಃ  ಪೂಜಾರಿ ಅವರೇ ಹೇಳಿದ್ದಾರೆ ಎಂದು ಪ್ರತಿಭಾ ಕುಳಾಯಿ ಹೇಳಿದರು.

 ‘ಪೂಜಾರಿ ಅವರಿಗೆ ಪಕ್ಷ ಟಿಕೆಟ್ ಕೊಟ್ಟಾಗಲೂ ಸೋತಿದ್ದು ಯಾಕೇ ಎಂದು ಸಲೀಂ ಅಹ್ಮದ ಅವರು ಪ್ರಶ್ನಿಸಿದಾ ಆಗಿನ ಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿದ್ದೆ ಅಷ್ಟೇ. ಅವರು ಚುನಾವಣೆಗೆ ಸ್ಪರ್ಧೆ ಮಾಡಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನಾ ವಿಷಯಗಳು ಚುನಾವಣಾ ಪ್ರಮುಖ ವಿಷಯ ಆಗಿದ್ದವು.  ರಾಮಜನ್ಮ ಭೂಮಿ ವಿವಾದ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಪಕ್ಷ ಬಿಟ್ಟು ಹೋಗಿದ್ದರು.  ಈ ವೇಳೆ ಒಂದು ಸಮುದಾಯ ಜನರು  ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿ ಆಗಿತ್ತು. ಒಂದು ವರ್ಗದ ಜನರು ಜನಾರ್ಧನ ಪೂಜಾರಿ ಅವರನ್ನು ಸೋಲಿಸುತ್ತಲೇ ಹೋದರು ಎಂದು ಹೇಳಿದ್ದಷ್ಟೇ ಎಂದು  ಅವರು ಸ್ಪಷ್ಟನೆ ನೀಡಿದ್ದಾರೆ.

ಜನಾರ್ಧನ ಪೂಜಾರಿ ಅವರ ಬಗ್ಗೆ ಅವಹೇಳನದ ಹೇಳಿಕೆ ನೀಡಿದಾಗ ಅಂತವರ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ಬಹುಮಾನ  ಘೋಷಣೆ ಮಾಡಿದ್ದೇ. ಅಷ್ಟು ಅವರ ಬಗ್ಗೆ ಕಾಳಜಿ ಹೊಂದಿರುವ ನಾನು ಅವರ ಬಗ್ಗೆ ನಾನ್ಯಾಕೆ ಅವಹೇಳನ ಮಾಡಲಿ.  ಕೇಲವರು ಇದನ್ನೇ ರಾಜಕೀಯವಾಗಿ ಬಳಸುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಫೇಸ್ಬುಕ್ ನಲ್ಲಿ ಉತ್ತರ ನೀಡಿದ್ದೇನೆ. ಬೇಕಂತಲೇ ಇಂತಹ ಸುದ್ದಿ ವೈರಲ್ ಮಾಡುತ್ತಾರೆ ಎಂದು ಹೇಳಿದರು.   

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com