Breaking News

ಆಸ್ಕರ್ ಪರಿಗಣನೆಗೆ ‘ಕಾಂತಾರ’

 

ಕರಾವಳಿ ಡೈಲಿನ್ಯೂಸ್ ಡೆಸ್ಕ್

ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ‌ ನಿರ್ದೇಶನದ ಅದ್ಧೂರಿ ಚಿತ್ರ‌ RRR ಆಸ್ಕರ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಚಂದನವನದ‌ ಹಿಟ್ ಚಿತ್ರ ಕಾಂತಾರವನ್ನು ಆಸ್ಕರ್ ಪರಿಗಣನೆಗೆ ಕಳುಹಿಸಲಾಗಿದೆ.

ಬ್ರಿಟಿಷ್ ಆಡಳಿತ, ಸ್ವಾತಂತ್ರ್ಯ ಹೋರಾಟದ ಕಥಾಹಂದರ ಮತ್ತು ದೃಶ್ಯಗಳೊಂದಿಗೆ ಪ್ರೇಕ್ಷಕರ ಮನಗೆದ್ದಿರುವ RRR ಚಿತ್ರ ಹಾಗೂ ಗುಜರಾತಿಯ ಚೆಲ್ಲೊ ಶೋ ಚಿತ್ರಗಳನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಸಂಸ್ಥೆ ಆಸ್ಕರ್ ಪ್ರಶಸ್ತಿಗಾಗಿ ಶಾರ್ಟ್‌ಲಿಸ್ಟ್ ಗೆ ಆಯ್ಕೆ ಮಾಡಿದೆ.

95ನೇ ಆಸ್ಕರ್ ಪ್ರಶಸ್ತಿಗಾಗಿ ಸಾಕ್ಷ್ಯಚಿತ್ರ, ಅಂತರರಾಷ್ಟ್ರೀಯ ಚಲನಚಿತ್ರ, ಮೇಕ್ ಅಪ್ ಮತ್ತು ಹೇರ್ ಸ್ಟೈಲಿಂಗ್, ಸ್ಕೋರ್, ಮೂಲ ಹಾಡು, ಧ್ವನಿ, ದೃಶ್ಯ ಪರಿಣಾಮ ಮತ್ತು ಕಿರುಚಿತ್ರ ಸೇರಿದಂತೆ 10 ವಿಭಾಗಗಳಿಗೆ ಶಾರ್ಟ್ ಲಿಸ್ಟ್ ಮಾಡಲಾಗಿದೆ.

ಗುಜರಾತಿ ಚಿತ್ರ ಚೆಲ್ಲೊ ಶೋ ಕೂಡ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಅಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

  1.  

20 ವರ್ಷಗಳ ನಂತರ ಭಾರತೀಯ ಚಿತ್ರ ಈ ವರ್ಗಕ್ಕೆ ನಾಮನಿರ್ದೇಶನ ಆಗಿರುವುದಕ್ಕೆ ನಿರ್ಮಾಪಕರಾದ ಸಿದ್ಧಾರ್ಥ್ ರಾಯ್ ಕಪೂರ್, ಧೀರ್ ಮೊಮಯಾ ಮತ್ತು ನಿರ್ದೇಶಕ ಪಾನ್ ನಳೀನ್ ಸಂತಸ ವ್ಯಕ್ತಪಡಿಸಿದ್ದಾರೆ.

‘ನಾಟು ನಾಟು’ ಹಾಡು ಶಾರ್ಟ್ ಲಿಸ್ಟ್:

ಜೂನಿಯರ್ ಎನ್‌ಟಿಆರ್, ಅಜಯ್ ದೇವಗನ್, ಆಲಿಯಾ ಭಟ್, ರಾಮ್ ಚರಣ್ ಮುಖ್ಯ ಭೂವಿಕೆಯಲ್ಲಿ ನಟಿಸಿರುವ RRR ಚಿತ್ರದ ಐಕಾನಿಕ್ ಹಾಡು ‘ನಾಟು ನಾಟು’ ಅತ್ಯುತ್ತಮ ಹಾಡುಗಳ ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಸೇರಿದೆ.

ಆಸ್ಕರ್ ಪರಿಗಣನೆಗೆ ಕಾಂತಾರ:

ಚಂದನವನದ‌ ಹಿಟ್ ಚಿತ್ರ ಕಾಂತಾರವನ್ನು ಆಸ್ಕರ್ ಪರಿಗಣನೆಗೆ ಕಳುಹಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡ ರಿಷಬ್ ಶೆಟ್ಟಿ ನಿರ್ದೇಶಿಸಿ‌ ನಟಿಸಿರುವ ಕಾಂತಾರ ಚಿತ್ರವನ್ನು ಆಸ್ಕರ್ ಪರಿಗಣನೆಗೆ ಕಳುಹಿಸಲಾಗಿದೆ‌ ಎಂದು ಹೊಂಬಾಳೆ ಪ್ರೊಡೆಕ್ಷನ್ ಮಾಲೀಕ ವಿಜಯ್ ಕಿರಂಗದೂರು ಖಚಿತಪಡಿಸಿದ್ದಾರೆ.

ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದ ಕಾಂತಾರ ಚಿತ್ರ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದೆ. ಇಲ್ಲಿವರೆಗೂ 400 ಕೋಟಿಗೂ ಹೆಚ್ಚು ಲಾಭ ಗಳಿಸಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com