Breaking News

ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ `ಮಿಲನ್’ ಸಂಭ್ರಮ

 

ಮಂಗಳೂರು: ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಸ್ಕೃತಿಕ ವೈವಿಧ್ಯತೆಯ ಆಚರಣೆ ಮಿಲನ್– 2022  ಅನ್ನು ಆಚರಿಸಲಾಯಿತು.

ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಂಜಾಬಿ ಧೋಲ್ ಮೆರವಣಿಗೆಯೊಂದಿಗೆ ಉದ್ಘಾಟನೆ ಮಾಡಲಾಯಿತು. ಸಮಾರಂಭವನ್ನು  ಡಾ. ರಿಯೊ ಡಿಸೋಜ ಉದ್ಘಾಟಿಸಿ ಮಾತನಾಡಿ,  ವಿಭಿನ್ನ ಸಮುದಾಯ ಒಟ್ಟಿಗೆ ಸೇರಿಸುವ ಮಾನವೀಯ ಗುಣಗಳನ್ನು ಬೆಳೆಸುವ ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದರು.

  1.  

ಪAಜಾಬಿ ಧೋಲ್ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯಿತು, ಜತೆಗೆ ವಿದ್ಯಾರ್ಥಿಗಳು ಧೋಲ್‌ನ ಬೀಟ್‌ಗಳಿಗೆ ನೃತ್ಯ ಮಾಡುತ್ತಾ ಸುತ್ತಲಿನ ಆಚರಣೆಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು. ಇದರ ನಂತರ ಉಜ್ವಲ್, ಚಿತ್ರಕಲಾ, ರಂಗ ತರಂಗ್, ಆಹಾರ್, ಶಟರ್ ಅಪ್, ರೀಲ್-ಇಟ್ ಇನ್, ಎಥ್ನಿಕ್ ಫಿಯೆಸ್ಟಾ ಮತ್ತು ಟ್ಯಾಲೆಂಟ್ ಹಂಟ್ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆದವು.

ಎಸ್‌ಜೆಇಸಿಯ ನಿರ್ದೇಶಕ ರೆ.ಫಾ ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜ, ಎಸ್‌ಜೆಇಸಿಯ ಸಹಾಯಕ ನಿರ್ದೇಶಕ ರೆ.ಫಾ. ಅಲ್ವಿನ್ ರಿಚರ್ಡ್ ಡಿ’ಸೋಜ ಎಸ್‌ಜೆಇಸಿಯ ಪ್ರಾಂಶುಪಾಲೆ ಡಾ. ರಿಯೊ ಡಿ’ಸೋಜ, ಎಸ್‌ಜೆಇಸಿಯ ಉಪ ಪ್ರಾಚಾರ್ಯ ಡಾ. ಪುರುಷೋತ್ತಮ ಚಿಪ್ಪಾರ್ ಮತ್ತು ಎಸ್‌ಜೆಇಸಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ ಇದ್ದರು.

ಈಚೆಗೆ ಯುಎಇಯ ದುಬೈನಲ್ಲಿ ನಡೆದ ಏಷ್ಯನ್ ಜೂನಿಯರ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿದ್ಯಾರ್ಥಿ ಅರೆನ್ ಜಾಯ್ ಫರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com